ಮಂಡ್ಯ: ಕಂಠ ಪೂರ್ತಿ ಕುಡಿದು ಬಸ್ ಚಾಲಕನ ಹುಚ್ಚಾಟ, ಬಟ್ಟೆ ಕಳಚಿ ಅಸಭ್ಯ ವರ್ತನೆ
ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಮದ್ಯಪಾನ ಮಾಡಿದ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಪ್ಯಾಂಟ್ ಶರ್ಟ್ ಕಳಚಿ ಅಸಭ್ಯವಾಗಿ ಕೂಗಾಡಿ, ಶಿಳ್ಳೆ ಹಾಕಿದ್ದಾನೆ. ಪ್ರಯಾಣಿಕರು ಮುಜುಗರಕ್ಕೊಳಗಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಿಗೆ ತೀವ್ರ ಮುಜುಗರವಾಗಿದೆ.
ಮಂಡ್ಯ, ಸೆಪ್ಟೆಂಬರ್ 18: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಓರ್ವ ಬಸ್ ಚಾಲಕ ಕಂಠಪೂರ್ತಿ ಕುಡಿದು ಬಂದು ಹುಚ್ಚಾಟ ಮೆರೆದಿರುವಂತಹ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ಬಟ್ಟೆ ಕಳಚಿ ಅಸಭ್ಯ ವರ್ತನೆ ಮಾಡಿದ್ದಾರೆ. ಚಾಲಕನ ವರ್ತನೆ ನೋಡಿ ಮಹಿಳಾ ಪ್ರಯಾಣಿಕರು ಮುಜುಗರದಿಂದ ದೂರ ಸರಿದಿದ್ದಾರೆ. ಆತನ ಕಿರಿಕಿರಿಗೆ ಬೇಸತ್ತು ಸ್ಥಳದಲ್ಲಿದ್ದ ಪ್ರಯಾಣಿಕರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos
