Pramod: ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆದ ಮಂಡ್ಯ ಹುಡ್ಗ ನಟ ಪ್ರಮೋದ್
ನಟ ಪ್ರಮೋದ್ ಅಭಿನಯದ 'ಬಾಂಡ್ ರವಿ' ನಾಳೆ (ಡಿ. 9) ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಟಿವಿ9 ಜೊತೆಗೆ ಪ್ರಮೋದ್ ಮಾತನಾಡಿದ್ದಾರೆ.
ನಟ ಪ್ರಮೋದ್ (Pramod) ಅಭಿನಯದ ‘ಬಾಂಡ್ ರವಿ’ ಚಿತ್ರ (Bond Ravi) ಇಂದು (ಡಿ. 9) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಟಿವಿ9 ಜೊತೆಗೆ ಪ್ರಮೋದ್ ಮಾತನಾಡಿದ್ದಾರೆ. ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಪ್ರಮೋದ್, ಬಳಿಕ ‘ಗೀತಾ ಬ್ಯಾಂಗಲ್ ಸ್ಟೋರ್’ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ. ನಂತರ ಡಾಲಿ ಧನಂಜಯ್ ನಟನೆಯ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದಾದ ಬಳಿಕ ಸದ್ಯ ‘ಬಾಂಡ್ ರವಿ’ ಆಗಿ ತೆರೆಗೆ ಆಗಮಿಸಿದ್ದಾರೆ. ನಟ ಪ್ರಮೋದ್ ಅವರಿಗೆ ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲ. ಆದರೂ ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ಕುರಿತಾಗಿ ಅವರ ಬಾಯಿಯಲ್ಲಿ ಕೇಳಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.