ನಟ ಪ್ರಮೋದ್ (Actor Pramod) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಬಾಂಡ್ ರವಿ’ ಸಿನಿಮಾ ಡಿಸೆಂಬರ್ 9ರಂದು ತೆರೆಗೆ ಬರುತ್ತಿದೆ. ಜೊತೆಗೆ ಅವರು ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಸಲಾರ್’ (Salaar) ಸಿನಿಮಾದಲ್ಲಿ ನಟ ಪ್ರಭಾಸ್ ಅವರೊಂದಿಗೂ ಸ್ಕ್ರೀನ್ ಶೇರ್ ಕೂಡ ಮಾಡಿದ್ದಾರೆ. ‘ಸಲಾರ್’ ಚಿತ್ರದಲ್ಲಿ ಪ್ರಭಾಸ್ ಜೊತೆಗಿನ ಒಡನಾಟವನ್ನು ಟಿವಿ 9ನೊಂದಿಗೆ ಪ್ರಮೋದ್ ಹಂಚಿಕೊಂಡಿದ್ದಾರೆ. ‘ಆ್ಯಕ್ಷನ್ ಎಂದಾಗ ಪ್ರಭಾಸ್ ಅವರು ತುಂಬಾ ರೆಬೆಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಕಟ್ ಎಂದಾಗ ಎಲ್ಲರೊಂದಿಗೆ ಫ್ರೆಂಡ್ ಆಗುತ್ತಾರೆ. ಮುಂಚೆ ಏನು ಮಾಡುತ್ತಿದ್ದೀರಿ, ಇವಾಗ ಏನು ಮಾಡುತ್ತಿದ್ದೀರಿ ಎಂದೆಲ್ಲ ಕೇಳಿದರು’ ಎಂದರು. ಪ್ರಭಾಸ್ ಅವರ ಬಗ್ಗೆ ನಟ ಪ್ರಮೋದ್ ಏನೇನೆಲ್ಲಾ ಮಾತನಾಡಿದರು ಎಂದು ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.