ಬಾಗಲಕೋಟೆ: ಜಮಖಂಡಿ ಬೈಪಾಸ್ ಬಳಿ ಸಕ್ಕರೆಮೂಟೆ ಹೊತ್ತ ಟ್ರಕ್ ಉರುಳಿಬಿದ್ದು ಚಾಲಕನಿಗೆ ಗಾಯ

ಬಾಗಲಕೋಟೆ: ಜಮಖಂಡಿ ಬೈಪಾಸ್ ಬಳಿ ಸಕ್ಕರೆಮೂಟೆ ಹೊತ್ತ ಟ್ರಕ್ ಉರುಳಿಬಿದ್ದು ಚಾಲಕನಿಗೆ ಗಾಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 09, 2022 | 10:58 AM

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಲಾರಿಯು ಜಮಖಂಡಿ ಶುಗರ್ಸ್ ನಿಂದ ರಾಯಬಾಗ್ ಕಡೆ ಹೊರಟಾಗ ದುರ್ಘಟನೆ ಸಂಭವಿಸಿದೆ.

ಬಾಗಲಕೋಟೆ: ಸಕ್ಕರೆ ಮೂಟೆಗಳ ಲೋಡ್ ಹೊತ್ತು ಸಾಗುತ್ತಿದ್ದ ಟ್ರಕ್ಕೊಂದು ಜಿಲ್ಲೆಯ ಜಮಖಂಡಿ ಬೈಪಾಸ್ (Jamakhandi Bypass) ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಲಾರಿಯು ಜಮಖಂಡಿ ಶುಗರ್ಸ್ ನಿಂದ ರಾಯಬಾಗ್ (Raibagh) ಕಡೆ ಹೊರಟಾಗ ದುರ್ಘಟನೆ ಸಂಭವಿಸಿದೆ. ಚಾಲಕನಿಗೆ (driver) ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗಿದೆ. ಜಮಖಂಡಿ ನಗರ ಪೊಲೀಸ್ ರಾಣೆಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 09, 2022 10:50 AM