ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಹಟಕ್ಕೆ ಬಿದ್ದ ಸಾಧು, ಅಧಿಕಾರಿಗಳಿಗೆ ಬಲಪ್ರಯೋಗಿಸುವ ಅನಿವಾರ್ಯತೆ!

ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಹಟಕ್ಕೆ ಬಿದ್ದ ಸಾಧು, ಅಧಿಕಾರಿಗಳಿಗೆ ಬಲಪ್ರಯೋಗಿಸುವ ಅನಿವಾರ್ಯತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2022 | 11:58 AM

ಅಂತಿಮವಾಗಿ ಅಧಿಕಾರಿಗಳು ಬಲಪ್ರಯೋಗ ಮಾಡಿ ಸಾಧುವನ್ನು ಅಲ್ಲಿಂದ ದೂರ ಕರೆದೊಯ್ಯಬೇಕಾಯಿತು

ಕೊಪ್ಪಳ: ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ (Anjanadri Betta) ಶುಕ್ರವಾರ ಬೆಳಗ್ಗೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand Gehlot) ಅವರು ಭೇಟಿ ನೀಡಿ ಪೂಜೆ ಸಲ್ಲಸುವ ಮೊದಲು ವಿದ್ಯಾದಾಸ ಬಾಬಾ (Vidyadas Baba) ಹೆಸರಿನ ಉತ್ತರ ಭಾರತದ ಸಾಧುವೊಬ್ಬರು ಪೂಜೆ ನಡೆಸುವ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬೆಟ್ಟದಲ್ಲಿ ಬೇರೆಯವರಿಗೆ ಪೂಜೆ ಸಲ್ಲಿಸುವ ಅವಕಾಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದರೂ ವಿದ್ಯಾದಾಸ ತಾನು ಪೂಜೆ ಮಾಡಿಯೇ ತೀರುತ್ತೇನೆ ಅಂತ ಹಟಕ್ಕೆ ಬಿದ್ದರು. ಅಂತಿಮವಾಗಿ ಅಧಿಕಾರಿಗಳು ಬಲಪ್ರಯೋಗ ಮಾಡಿ ಸಾಧುವನ್ನು ಅಲ್ಲಿಂದ ದೂರ ಕರೆದೊಯ್ಯಬೇಕಾಯಿತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ