ಗುಜರಾತ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಲಿಲ್ಲದ ಸರದಾರ ಅಂತ ಮತ್ತೊಮ್ಮೆ ಸಾಬೀತು!

ಗುಜರಾತ್​ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಲಿಲ್ಲದ ಸರದಾರ ಅಂತ ಮತ್ತೊಮ್ಮೆ ಸಾಬೀತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 09, 2022 | 6:01 PM

ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ಪ್ರಧಾನಿ ಮೋದಿಯರು ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಿದ್ದಾರೆ. ಅವರನ್ನು ಸೋಲಿಲ್ಲದ ಸರದಾರ ಅಂತ ಕರೆಯುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಮತ್ತು ರ್ಯಾಲಿಗಳನ್ನು (rally) ನಡೆಸುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ನರೇಂದ್ರನಿಗಿಂತ ಹೆಚ್ಚು ಸೀಟುಗಳನ್ನು ಭೂಪೇಂದ್ರನಿಗೆ (Bhupendra Patel) ಕೊಡಿಸಬೇಕು ಅಂತ ಅಲ್ಲಿನ ಮತದಾರರಲ್ಲಿ (voters) ಮಾಡುತ್ತಿದ್ದ ಮನವಿ ಆಕ್ಷರಶಃ ಸಾಕಾರಗೊಂಡಿದೆ. ಮತದಾರರು ವಿಧಾನ ಸಭೆಯ 182 ಸೀಟುಗಳ ಪೈಕಿ 156 ರಲ್ಲಿ ಗೆಲುವು ಕೊಡಿಸಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಸಾಧನೆ ಹಿಂದಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ. ಹಿಂದೆ, 1985 ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಕಳೆದ 27 ವರ್ಷಗಳಿಂದ ಗುಜರಾತ್ ನಲ್ಲಿ ಪ್ರಧಾನಿ ಮೋದಿಯರು ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಿದ್ದಾರೆ. ಅವರನ್ನು ಸೋಲಿಲ್ಲದ ಸರದಾರ ಅಂತ ಕರೆಯುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Dec 09, 2022 01:13 PM