ದೇವನಹಳ್ಳಿ: ವೇಣುಗೋಪಾಲಸ್ವಾಮಿ ಲಕ್ಷದೀಪೋತ್ಸವದಲ್ಲಿ ದೀಪ ಮತ್ತು ಪುಷ್ಪಾಲಂಕಾರ ಭಕ್ತರನ್ನು ನಿಬ್ಬೆರಗಾಗಿಸಿದೆ!

ದೇವನಹಳ್ಳಿ: ವೇಣುಗೋಪಾಲಸ್ವಾಮಿ ಲಕ್ಷದೀಪೋತ್ಸವದಲ್ಲಿ ದೀಪ ಮತ್ತು ಪುಷ್ಪಾಲಂಕಾರ ಭಕ್ತರನ್ನು ನಿಬ್ಬೆರಗಾಗಿಸಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 09, 2022 | 2:40 PM

ಲಕ್ಷದೀಪೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಜಾಗ್ರತೆವಹಿಸಲು ದೇವನಹಳ್ಳಿಯಾದ್ಯಾಂತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ದೇವನಹಳ್ಳಿಯ ಐತಿಹಾಸಿಕ ವೇಣುಗೋಪಾಲಸ್ವಾಮಿ (Venugopalaswamy) ದೇವಾಸ್ಥಾನದಲ್ಲಿ ಲಕ್ಷದೀಪೋತ್ಸವ (Lakshadeepotsava) ಬಹು ವಿಜೃಂಭಣೆಯಿಂದ ನಡೆಯುತ್ತಿದೆ. ದೇವಸ್ಥಾನಕ್ಕೆ ಮಾಡಿರುವ ಮನಮೋಹಕ ದೀಪ ಮತ್ತು ಪುಷ್ಪಾಲಂಕಾರ ಕಣ್ಮನ ಸೆಳೆಯುತ್ತಿದೆ. ಗರ್ಭಗುಡಿಯಲ್ಲಿ ವೇಣುಗೋಪಾಲಸ್ವಾಮಿ ವಜ್ರಖಚಿತ (diamond-studded) ಆಭರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದಾನೆ. ಲಕ್ಷದೀಪೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಜಾಗ್ರತೆವಹಿಸಲು ದೇವನಹಳ್ಳಿಯಾದ್ಯಾಂತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ರಾಜ್ಯದ ನಾನಾಭಾಗಗಳಿಂದ ಭಕ್ತಸಾಗರ ದೇವನಹಳ್ಳಿ ಕಡೆ ಬರುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ