ಗುಜರಾತ್ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆಗೆ ಸಾಕ್ಷಿ: ಬಿಎಸ್ ಯಡಿಯೂರಪ್ಪ

TV9kannada Web Team

TV9kannada Web Team | Edited By: Arun Belly

Updated on: Dec 08, 2022 | 4:01 PM

ಕರ್ನಾಟಕದಲ್ಲೂ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಬಿಜೆಪಿ 140ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪುನಃ ಸರ್ಕಾರ ರಚಿಸಲಿದೆ ಎಂದು ಬಿಎಸ್​ವೈ ಹೇಳಿದರು.

ಬೆಂಗಳೂರು: ಗುಜರಾತ್ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ (Gujarat Assembly Polls) ಬಿಜೆಪಿ ಎದುರಾಳಿ ಪಕ್ಷಗಳನ್ನು ನೆಲಸಮಗೊಳಿಸಿ 182 ಕ್ಷೇತ್ರಗಳ ಪೈಕಿ 155 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಜನಪ್ರಿಯತೆ ಮತ್ತು ಅವರು ಜಾರಿಗೊಳಿಸಿದ ಯೋಜನೆಗಳ ದ್ಯೋತಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಬೆಂಗಳೂರಲ್ಲಿ ಇಂದು ಹೇಳಿದರು. ಹಿಮಾಚಲ ಪ್ರದೇಶದಲ್ಲಿ 5 ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುವ ಪರಿಪಾಠವಿದೆ ಎಂದು ಹೇಳಿದ ಅವರು ಕರ್ನಾಟಕದಲ್ಲೂ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಬಿಜೆಪಿ 140ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಪುನಃ ಸರ್ಕಾರ ರಚಿಸಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada