ಕಲಬುರಗಿ: ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ

TV9kannada Web Team

TV9kannada Web Team | Edited By: Arun Belly

Updated on: Dec 08, 2022 | 2:09 PM

ಕಲಬುರಗಿಯಲ್ಲಿ ಒಂದು ಸಾವಿರ ಕೇಜಿಯಷ್ಟು ಗಾಂಜಾವನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡುತ್ತಾರೆ, ಅದರ ಅರ್ಥ ಡ್ರಗ್ ಮಾಫಿಯಾದೊಂದಿಗೆ ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆ, ಎಂದು ಖರ್ಗೆ ಆರೋಪಿಸಿದರು.

ಕಲಬುರಗಿ ನಗರ ಮಾದಕ ವಸ್ತುಗಳ ಹಬ್ ಆಗಿ ಮಾರ್ಪಟ್ಟಿದೆ ಮತ್ತು ಸುಲಿಗೆ ಪ್ರಕರಣದ ಬಗ್ಗೆ ಗೃಹ ಸಚಿವರ ಗಮನಕ್ಕೆ ತಂದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ, ಆರಗ ಜ್ಞಾನೇಂದ್ರ (Araga Jnanendra) ಏನಾದರೂ ಕತ್ತೆ ಕಾಯುತ್ತಿದ್ದಾರಾ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿ ಕಾರಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡಿದ ಖರ್ಗೆ, ಕಲಬುರಗಿಯಲ್ಲಿ ಒಂದು ಸಾವಿರ ಕೇಜಿಯಷ್ಟು ಗಾಂಜಾವನ್ನು (marijuana) ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡುತ್ತಾರೆ, ಅದರ ಅರ್ಥ ಡ್ರಗ್ ಮಾಫಿಯಾದೊಂದಿಗೆ ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆ, ಎಂದು ಆರೋಪಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada