ಮಂಡ್ಯ: ಮಹಿಳಾ ಕಾನ್ಸ್ಟೇಬಲ್ ಇಲ್ಲದ ಠಾಣೆಗೆ ಒಬ್ಬ ಯುವತಿಯನ್ನು ಪೊಲೀಸರು ರಾತ್ರಿ ಕರೆತಂದಾಗ ವಕೀಲರು ಅದನ್ನು ಪ್ರಶ್ನಿಸಿದರು!
ಯುವತಿ ಜೊತೆ ತಾನು ಬಂದಿರುವುದಾಗಿ ಪೊಲೀಸ್ ಜೀಪಿನಿಂದ ಒಬ್ಬ ಯುವಕ ಕೆಳಗಿಳಿದು ಹೇಳುತ್ತಾನೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪೊಲೀಸರು ಯುವತಿಯ ವಿಚಾರಣೆ ನಡೆಸಿ ಮನೆಗೆ ವಾಪಸ್ಸು ಕಳಿಸಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ (Rural Police Station) ಸಿಬ್ಬಂದಿ ರಾತ್ರಿ ಸಮಯ ಕಚೇರಿಯಲ್ಲಿ ಒಬ್ಬೇ ಒಬ್ಬ ಮಹಿಳಾ ಕಾನ್ಸ್ಟೇಬಲ್ (lady constable) ಇಲ್ಲದೇ ಹೋದಾಗ್ಯೂ ಒಬ್ಬ ಮಹಿಳೆಯನ್ನು ವಿಚಾರಣೆಗೆ ಕರೆತಂದಿದ್ದಾರೆ. ಅವರ ಕ್ರಮ ಪ್ರಶ್ನಿಸಲು ಕೆಲ ವಕೀಲರು (lawyers) ಪೊಲೀಸ್ ಠಾಣೆಗೆ ಬಂದಾಗ ಅವರ ಮಾತಿನ ಚಕಮಕಿ ಶುರುವಿಟ್ಟುಕೊಂಡಿದೆ. ಪೊಲೀಸ್ ಇನ್ಸ್ಪೆಕ್ಟರ್ ಮಹಿಳಾ ಪೊಲೀಸ್ ಪೇದೆಯನ್ನು ಕರೆಸುವುದಾಗಿ ಹೇಳುತ್ತಿದ್ದಾರೆ. ಯುವತಿ ಜೊತೆ ತಾನು ಬಂದಿರುವುದಾಗಿ ಪೊಲೀಸ್ ಜೀಪಿನಿಂದ ಒಬ್ಬ ಯುವಕ ಕೆಳಗಿಳಿದು ಹೇಳುತ್ತಾನೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಪೊಲೀಸರು ಯುವತಿಯ ವಿಚಾರಣೆ ನಡೆಸಿ ಮನೆಗೆ ವಾಪಸ್ಸು ಕಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.