ಬಗಲಗುಂಟೆಯಲ್ಲಿ ರಸ್ತೆಪಕ್ಕ ನಿಂತು ಮದ್ಯ ಸೇವಿಸುತ್ತಿದ್ದವರು ಪಿಎಸ್ಐಯನ್ನು ಕಂಡು ಓಡಿಹೋದರು!
ಪಿಎಸ್ಐ ಲೋಕೇಶ್ ಸೋಮವಾರ ರಾತ್ರಿ ಗಸ್ತು ತಿರುಗಿ ರಸ್ತೆಗಳ ಪಕ್ಕ ನಿಂತು ಕುಡಿಯುತ್ತಿದ್ದವರನ್ನು ಗದರಿಸಿ ಅಟ್ಟಿಸಿದ್ದಾರೆ ಮತ್ತು ಬಾರ್ ಒಳಗಡೆ ಹೋಗಿ ಕುಡಿಯುವಂತೆ ತಾಕೀತು ಮಾಡಿದ್ದಾರೆ.
ಬೆಂಗಳೂರಿನ ಬಗಲಗುಂಟೆ (Bgalgunte) ಪೊಲೀಸ್ ಸ್ಟೇಶನ್ ವ್ಯಾಪ್ತಿಯಲ್ಲಿ ಬರುವ ಮದ್ಯದ ಅಂಗಡಿಗಳ ಮುಂದೆ ರಸ್ತೆ ಪಕ್ಕವೇ ನಿಂತು ಕುಡುಕರು ಮದ್ಯ ಸೇವಿಸುವುದು ಸಾಮಾನ್ಯ ದೃಶ್ಯ. ಇದರಿಂದ ಬೇಸತ್ತಿದ್ದ ಸಾರ್ವಜನಿಕರು (public) ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ಪಿಎಸ್ಐ ಲೋಕೇಶ್ (PSI Lokesh) ಸೋಮವಾರ ರಾತ್ರಿ ಗಸ್ತು ತಿರುಗಿ ರಸ್ತೆಗಳ ಪಕ್ಕ ನಿಂತು ಕುಡಿಯುತ್ತಿದ್ದವರನ್ನು ಗದರಿಸಿ ಅಟ್ಟಿಸಿದ್ದಾರೆ ಮತ್ತು ಬಾರ್ ಒಳಗಡೆ ಹೋಗಿ ಕುಡಿಯುವಂತೆ ತಾಕೀತು ಮಾಡಿದ್ದಾರೆ. ಅಲ್ಲದೆ, ಮದ್ಯದ ಅಂಗಡಿಗಳಲ್ಲಿ ಲಿಕ್ಕರ್ ಮಾರುವವರಿಗೂ ಹೊರಗಡೆ ನಿಂತು ಕುಡಿಯಲು ಅವಕಾಶ ನೀಡಬಾರದು ಅಂತ ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 14, 2022 12:52 PM
Latest Videos