ಬಿಜೆಪಿಗೆ ಸುಮಲತಾ ಅಂಬರೀಷ್ ಪಕ್ಷ ಸೇರಲೆಂಬ ತವಕ, ಆದರೆ ಸಂಸದೆಗೆ ಅಂಥ ಆತುರವೇನೂ ಇಲ್ಲ!

|

Updated on: Mar 04, 2023 | 3:18 PM

ಬೆಂಗಳೂರಲ್ಲಿ ಪತ್ರಕರ್ತರೊಂದಿಗೆ ಮಾತಾಡಿದ ಸಂಸದೆ ತಾನಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ; ಆಪ್ತರೊಂದಿಗೆ ಬೆಂಬಲಿಗರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಹೇಳಿದರು.

ಬೆಂಗಳೂರು: ಸಂಸತ್ ಸದಸ್ಯೆ ಸುಮಲತಾ ಅಂಬರೀಷ್ (Sumalatha Ambareesh) ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ (BJP) ಇನ್ನಿಲ್ಲದ ಕಸರತ್ತು ನಡೆಸಿದೆ. ಆದರೆ ಸುಮಲತಾ ಮಾತ್ರ ಕಳೆದ 6 ತಿಂಗಳಿಂದ ಯಾವುದೇ ತೀರ್ಮಾನ ಪ್ರಕಟಿಸದೆ ಸುಮ್ಮನಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯರು ಸಹ ಸುಮಲತಾ ಅವರು ತಮ್ಮೊಂದಿಗೆ ಬರಲಿ ಅಂತ ಹಾತೊರೆಯುತ್ತಿದ್ದಾರೆ. ಬೆಂಗಳೂರಲ್ಲಿ ಇಂದು ಹಿರಿಯ ಮುತ್ಸದ್ದಿ ಹಾಗೂ ಬಿಜೆಪಿ ನಾಯಕ ಎಸ್ ಎಂ ಕೃಷ್ಣ (SM Krishna) ಅವರನ್ನು ಭೇಟಯಾದ ಸಂಸದೆ ಬಳಿಕ ಪತ್ರಕರ್ತರೊಂದಿಗೆ ಮಾತಾಡಿ ತಾನಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ; ಆಪ್ತರೊಂದಿಗೆ ಬೆಂಬಲಿಗರೊಂದಿಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 04, 2023 03:17 PM