Disha Ramesh: ಮಂಡ್ಯ ರಮೇಶ್​ ಪುತ್ರಿ ದಿಶಾ ಚಿತ್ರರಂಗದಿಂದ ಗ್ಯಾಪ್​ ಪಡೆದಿದ್ದು ಯಾಕೆ? ಇಲ್ಲಿದೆ ‘ದಿ’ ನಟಿಯ ಉತ್ತರ

| Updated By: ಮದನ್​ ಕುಮಾರ್​

Updated on: Jan 16, 2023 | 8:28 PM

Mandya Ramesh Daughter: ‘ದಿ’ ಸಿನಿಮಾದಲ್ಲಿ ದಿಶಾ ರಮೇಶ್​ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್​ (Mandya Ramesh) ಅವರ ಪುತ್ರಿ ದಿಶಾ ರಮೇಶ್​ (Disha Ramesh) ಅವರು 2016ರಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು. ‘ದೇವರ ನಾಡಲ್ಲಿ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆದರೆ ನಂತರ ಅವರು ದೀರ್ಘ ಬ್ರೇಕ್​ ಪಡೆದುಕೊಂಡರು. ಈಗ ಅವರು ಮತ್ತೆ ಚಿತ್ರರಂಗಕ್ಕೆ (Kannada Film Industry) ಮರಳಿದ್ದಾರೆ. ‘ದಿ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ದಿಶಾ ರಮೇಶ್​ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತಾವು ಗ್ಯಾಪ್​ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:05 pm, Mon, 16 January 23

Follow us on