Kannada Rajyotsava: ಬಣ್ಣದ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಿಸಿ ನಿತ್ಯ ಪೂಜೆ; ಇದು ಮಂಡ್ಯದ ವ್ಯಕ್ತಿಯ ಕನ್ನಡಾಭಿಮಾನ

ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಸಾಕ್ಷಿ ಈತನ ಬಣ್ಣದ ಮನೆ. ಈ ಮನೆಯ ವೈಶಿಷ್ಟ್ಯ ತಿಳಿದರೆ ಕನ್ನಡ ಅಭಿಮಾನಿಗೆ ಭೇಷ್ ಎನ್ನುವಿರಿ.

Kannada Rajyotsava: ಬಣ್ಣದ ಮನೆಯಲ್ಲಿ ಕನ್ನಡಾಂಬೆಗೆ ಗರ್ಭಗುಡಿ ನಿರ್ಮಿಸಿ ನಿತ್ಯ ಪೂಜೆ; ಇದು ಮಂಡ್ಯದ ವ್ಯಕ್ತಿಯ ಕನ್ನಡಾಭಿಮಾನ
| Updated By: Rakesh Nayak Manchi

Updated on:Nov 01, 2022 | 11:48 AM

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಹೀಗೊಬ್ಬ ಅಪ್ಪಟ ಕನ್ನಡಾಭಿಮಾನಿ. ಈ ಕನ್ನಡಾಭಿಮಾನಿಯ ಅಭಿಮಾನಕ್ಕೆ ಸಾಕ್ಷಿ ಈತನ ಬಣ್ಣದ ಮನೆ. ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ಶಿವನಂಜು ಮನೆ ಕನ್ನಡ ಭಾವುಟ ಬಣ್ಣ (ಹಳದಿ ಮತ್ತು ಕೆಂಪು)ದಿಂದ ಕೂಡಿದೆ. ಈ ಬಣ್ಣದ ಮನೆಯಲ್ಲಿ ಕನ್ನಡಾಂಭೆಗೆ ಗರ್ಭಗುಡಿ ನಿರ್ಮಾಣ ಮಾಡಿ ನಿತ್ಯ ಪೂಜೆ ಮಾಡಲಾಗುತ್ತದೆ. ಅಲ್ಲದೆ ಕನ್ನಡ ಸಾಹಿತ್ಯದ ಕಂಪು ಹರಡಿದ ಕನ್ನಡದ ಕವಿಗಳ ಭಾವಚಿತ್ರಗಳನ್ನು ಮನೆಯಲ್ಲಿ ಇರಿಸಲಾಗಿದೆ. ಇಂದು ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಸ್ನೇಹಿತರ ಜೊತೆ ಸಂಭ್ರಮಿಸಲಾಗುತ್ತಿದೆ. ಈತನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:48 am, Tue, 1 November 22

Follow us