ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಮೂರು ದಿನವಾದ್ರೂ ಬಾರದ ಗಂಡ

Updated on: Sep 15, 2025 | 7:11 PM

ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆಯಾದ ಘಟನೆ ಮಂಡ್ಯದ ಮಲ್ಲಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. 26 ವರ್ಷದ ಹರ್ಷಿತಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಗಂಡ ಎಸ್ಕೇಪ್‌ ಆಗಿದ್ದು, ಹರ್ಷಿತಾ ಸಾವಿಗೆ ಗಂಡನ ಮನೆಯವರೇ ಕಾರಣವೆಂದು ಆರೋಪಿಸಿ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ, ಸೆಪ್ಟೆಂಬರ್‌ 15: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತ ಮಹಿಳೆಯ ಶವ (Woman’s body found hanging) ಪತ್ತೆಯಾದ ಆಘಾತಕಾರಿ ಘಟನೆ ಮಂಡ್ಯದ ಮಲ್ಲಯ್ಯನದೊಡ್ಡಿ  ಗ್ರಾಮದಲ್ಲಿ ನಡೆದಿದೆ. 26 ವರ್ಷದ ಹರ್ಷಿತಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ. ಈ ಮಹಿಳೆ ಸಾವಿನ ಬೆನ್ನಲ್ಲೇ  ಆಕೆಯ ಗಂಡ ಮತ್ತು ಮನೆಯವರು ನಾಪತ್ತೆಯಾಗಿದ್ದು, ಇದು ಕೊಲೆ ಎಂದು ಮಹಿಳೆಯ ಪೋಷಕರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಹಿಳೆ ಗಂಡನ ಮನೆ ಮುಂದೆ ಮೃತದೇಹವನ್ನಿಟ್ಟು ಸಂಬಂಧಿಕರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 15, 2025 07:11 PM