ಮಂಗಳೂರು: ಮೈ ಮೇಲೆ ಪ್ರೇತ ಬರುತ್ತೆ ಎಂದು ಮೂರು ತಿಂಗಳಿಂದ ಕೊಠಡಿಯಲ್ಲಿ ಮಹಿಳೆ ದಿಗ್ಬಂಧನ

| Updated By: ಆಯೇಷಾ ಬಾನು

Updated on: Jan 03, 2024 | 1:05 PM

ಮೈ ಮೇಲೆ ಪ್ರೇತ ಬರುತ್ತೆ ಎಂದು ಕಳೆದ ಮೂರು ತಿಂಗಳಿನಿಂದ ಮಹಿಳೆಯನ್ನು ಕೊಠಡಿಯಲ್ಲಿ ಬಂಧಿಸಲಾಗಿತ್ತು. ಶ್ರೀಪತಿ ಹೆಬ್ಬಾರ್ ಎಂಬಾತನ ಪತ್ನಿ ಆಶಾಲತಾ ಅವರನ್ನು ದಿಗ್ಬಂಧನದಲ್ಲಿಡಲಾಗಿತ್ತು. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಿಗ್ಬಂಧನದಿಂದ ಮಹಿಳೆಯನ್ನು ಬಿಡುಗಡೆಗೊಳಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮಂಗಳೂರು, ಜ.03: ಮೈ ಮೇಲೆ ಪ್ರೇತ ಬರುತ್ತೆ (Spirit Invocation) ಎಂದು ಮಹಿಳೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ಹೊರವಲಯದ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಎಂಬಲ್ಲಿ ನಡೆಸಿದೆ. ಘಟನೆ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ದಿಗ್ಬಂಧನದಿಂದ ಮಹಿಳೆಯನ್ನು ಬಿಡುಗಡೆಗೊಳಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮೈ ಮೇಲೆ ಪ್ರೇತ ಬರುತ್ತೆ ಎಂದು ಕಳೆದ ಮೂರು ತಿಂಗಳಿನಿಂದ ಮಹಿಳೆಯನ್ನು ಕೊಠಡಿಯಲ್ಲಿ ಬಂಧಿಸಲಾಗಿತ್ತು. ಶ್ರೀಪತಿ ಹೆಬ್ಬಾರ್ ಎಂಬಾತನ ಪತ್ನಿ ಆಶಾಲತಾ ಅವರನ್ನು ದಿಗ್ಬಂಧನದಲ್ಲಿಡಲಾಗಿತ್ತು. ಶ್ರೀಪತಿ ಹೆಬ್ಬಾರ್ ಅಡುಗೆ ವೃತ್ತಿ ಮಾಡುತ್ತಾರೆ. ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಆಶಾಲತಾ ಜೊತೆ ಅಂತರ್ಜಾತಿ ವಿವಾಹವಾಗಿದ್ದರು. ಆಕೆಯ ಮೇಲೆ‌ ಪ್ರೇತ ಬರುತ್ತಿದೆ ಎಂದು ಆರೋಪಿಸಿ ಮನೆ ಪಕ್ಕದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. ಕೇವಲ ಒಂದು ಹೊತ್ತು ಚಹಾ ಮತ್ತು ಬಿಸ್ಕತ್ತು ತಿನ್ನಲು ನೀಡಲಾಗುತ್ತಿತ್ತು. ಸ್ಥಳೀಯರ ದೂರಿನ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ