ಮಾವಿನ ಹಣ್ಣಿನ ಕೇಸರಿ ಬಾತ್; 20 ನಿಮಿಷಗಳಲ್ಲಿ ಸರಳ ವಿಧಾನದ ಮೂಲಕ ತಯಾರಿಸಿ

| Updated By: preethi shettigar

Updated on: Jun 12, 2021 | 7:14 AM

ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಈಗ ಮಾನಿನ ಹಣ್ಣು ಹೆಚ್ಚಾಗಿ ಸಿಗುವ ಸಮಯ. ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಹುಳಿ ಮಾವು ಸಿಕ್ಕರೆ ಅದರಿಂದ ಯಾವ ಅಡುಗೆ ಮಾಡಬಹುದು, ಸಿಹಿಯಾದ ಹಣ್ಣು ಇದ್ದರೆ ಯಾವ ತಿಂಡಿ ಮಾಡಬಹುದು ಎಂದು ಯೋಚಿಸುತ್ತಿದ್ದವರಿಗೆ ಇಲ್ಲಿದೆ ಉತ್ತರ. ಹಾಗಿದ್ದರೆ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡುವುದು ಹೇಗೆ ಎಂದು ಇವತ್ತು ತಿಳಿದುಕೊಳ್ಳೋಣ.

ಮಾವಿನ ಹಣ್ಣಿನ ಕೇಸರಿ ಬಾತ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು 1ಕಪ್ ಮಾವಿನ ಹಣ್ಣಿನ ಮಿಶ್ರಣ, 1ಕಪ್ ಹುರಿದ ಚಿರೋಟಿ ರವೆ, 1 ಕಪ್ ನೀರು, 1ಕಪ್ ಹಾಲು, ಅರ್ಧ ಕಪ್ ತುಪ್ಪ, ದ್ರಾಕ್ಷಿ ಮತ್ತು ಗೋಡಂಬಿ, ಏಲಕ್ಕಿ ಪುಡಿ, ಹಳದಿ ಬಣ್ಣದ ಫುಡ್ ಕಲರ್, ಕೇಸರಿ ದಳ.

ಮೊದಲು ಬಾಣಲೆಗೆ 2 ಚಮಚೆ ತುಪ್ಪ ಹಾಕಿ ಅದು ಬಿಸಿ ಆದ ಮೇಲೆ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದುಕೊಳ್ಳಿ, ಈಗ ಅದನ್ನು ತೆಗೆದು ಬದಿಯಲ್ಲಿ ಇಡಿ. ಮಾವಿನ ಹಣ್ಣಿನ ಮಿಶ್ರಣವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು, ಬಳಿಕ ಅದಕ್ಕೆ ಹಾಲು ಹಾಕಿ ತಿರುಗಿಸಿಕೊಳ್ಳಬೇಕು, ನಂತರ ಅದಕ್ಕೆ ನೀರು ಹಾಕಿ 2 ನಿಮಿಷ ಕುದಿಯಲು ಬಿಡಿ, ಬಳಿಕ ಏಲಕ್ಕಿ ಪುಡಿ, ಕೇಸರಿ ದಳ, ಹಳದಿ ಬಣ್ಣದ ಫುಡ್ ಕಲರ್ ಹಾಕಿ, ಆ ಮೇಲೆ ಹುರಿದ ದ್ರಾಕ್ಷಿ- ಗೋಡಂಬಿ ಹಾಕಿ ಕಲಸಿಕೊಳ್ಳಿ, ನಂತರ ಹುರಿದ ಚಿರೋಟಿ ರವೆ, ಸ್ವಲ್ಪ ತುಪ್ಪ ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಬೇಕಾದರೆ ಸ್ವಲ್ಪ ಸಕ್ಕರೆ ಸೇರಿಸಿ. ಬಳಿಕ 2 ರಿಂದ 3 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಾವಿನ ಹಣ್ಣಿನ ಕೇಸರಿ ಬಾತ್ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ:

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

ಸೀಗಡಿ ಪೆಪ್ಪರ್ ಸ್ಪೈಸಿ; ಸರಳವಾದ ವಿಧಾನದ ಜೊತೆ 20 ನಿಮಿಷಗಳಲ್ಲಿ ತಯಾರಿಸಿ

( Mango kesari bath recipe and step to prepare testy in kannada)

 

Published On - 7:46 am, Wed, 2 June 21

Follow us on