Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ನಾಡ್ ಸ್ಟೈಲ್​ನಲ್ಲಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇಲ್ಲಿದೆ

sandhya thejappa
| Updated By: Digi Tech Desk

Updated on:Jun 01, 2021 | 12:06 PM

ಕೆಲವರಿಗೆ ಖಾರ ಎಂದರೆ ತುಂಬಾ ಇಷ್ಟ. ಅಂತವರೂ ಮಲ್ನಾಡ್ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಡ್ರೈನ ಮಾಡಬಹುದು. ಹೆಚ್ಚು ಖಾರ ಇಷ್ಟ ಪಡದೆ ಇರುವವರೂ ಇದನ್ನು ತಯಾರಿಸಬಹುದು. ಆದರೆ ಖಾರ ಸ್ವಲ್ವ ಕಡಿಮೆ ಹಾಕಿದರೆ ಆಯ್ತು.

ಚಿಕನ್ ಅಂತ ನೆನೆಸಿಕೊಂಡರೆ ಸಾಕು ಮಾಂಸ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಒಂದೊಂದು ಕಡೆ ಒಂದೊಂದು ರೀತಿಯ ಚಿಕನ್ ಅಡುಗೆಯನ್ನು ತಯಾರಿಸುತ್ತಾರೆ. ಅದರಂತೆ ಮಲ್ನಾಡ್​ನಲ್ಲೂ ಖಾರ ಖಾರವಾಗಿ ಚಿಕನ್ ಪೆಪ್ಪರ್ ಡ್ರೈ ಮಾಡುತ್ತಾರೆ. ಇದನ್ನು ರೊಟ್ಟಿ ಜೊತೆಗೆ, ಚಪಾತಿ ಜೊತೆಗೆ, ಬಿಸಿ ಬಿಸಿ ಅನ್ನದ ಜೊತೆಗೂ ತಿನ್ನಬಹುದು. ಕೆಲವರಿಗೆ ಖಾರ ಎಂದರೆ ತುಂಬಾ ಇಷ್ಟ. ಅಂತವರೂ ಮಲ್ನಾಡ್ ಸ್ಟೈಲ್​ನಲ್ಲಿ ಚಿಕನ್ ಪೆಪ್ಪರ್ ಡ್ರೈನ ಮಾಡಬಹುದು. ಹೆಚ್ಚು ಖಾರ ಇಷ್ಟ ಪಡದೆ ಇರುವವರೂ ಇದನ್ನು ತಯಾರಿಸಬಹುದು. ಆದರೆ ಖಾರ ಸ್ವಲ್ವ ಕಡಿಮೆ ಹಾಕಿದರೆ ಆಯ್ತು. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸಾಮಾನ್ಯವಾಗಿ ಈ ಪೆಪ್ಪರ್ ಚಿಕನ್ ಡ್ರೈನ ಕಡುಬಿನ ಜೊತೆ ಸವಿಯುತ್ತಾರೆ.

ಮಲ್ನಾಡ್ ಸ್ಟೈಲ್ನಲ್ಲಿ ಚಿಕನ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು ಹೀಗಿವೆ. ಒಂದು ಕೆ.ಜಿ ಕೋಳಿ ಮಾಂಸ, ಎಣ್ಣೆ, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಕರಿಬೇವು, ನಿಂಬೆ ರಸ, ಟ್ಯೊಮ್ಯಾಟೋ, ಉಪ್ಪು, ಚಕ್ಕೆ, ಲವಂಗ, ಏಲಕ್ಕಿ. ಖಾರದ ಪುಡಿ, ಅರಿಶಿನ ಪುಡಿ, ಕಾಳು ಮೆಣಸಿನ ಪುಡಿ, ಹಸಿ ಮೆಣಸಿನಕಾಯಿ, ಎಲ್ಲ ಮಸಾಲೆಯ ಪುಡಿ, ಧನ್ಯ ಪುಡಿ, ಗರಂ ಮಸಾಲ. ಈ ಎಲ್ಲ ಸಾಮಾಗ್ರಿಗಳು ಬಳಸಿ ಖಾರ ಖಾರ ಚಿಕನ್ ಪೆಪ್ಪರ್ ಡ್ರೈ ಮಾಡಿ. ಮಾಡುವ ವಿಧಾನವನ್ನು ವಿಡಿಯೋದಲ್ಲಿ ಗಮನಿಸಿ.

ಇದನ್ನೂ ನೋಡಿ

ಕಡಿಮೆ ಸಮಯದಲ್ಲಿ ಮನೆಯಲ್ಲೇ ಮಾಡಿ ವೆಜ್ ಕಟ್ಲೆಟ್

ಕೊಡಗು ಸ್ಟೈಲ್​​ನಲ್ಲಿ ಮಾವಿನ ಹಣ್ಣಿನ ಸಾರು ಮಾಡೋ ವಿಧಾನ ಇಲ್ಲಿದೆ ನೋಡಿ..

(How to make malnad Style Chicken Pepper Dry)

Published on: Jun 01, 2021 08:33 AM