SSLC, PUC Exam 2021: ಪರೀಕ್ಷೆ ನಡೆಸದಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ಏಕಾಂಗಿ ಧರಣಿ

ಸಾಧು ಶ್ರೀನಾಥ್​
|

Updated on: Jun 01, 2021 | 2:10 PM

SSLC PUC Exam 2021: ಕೊರೊನಾ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಮಾಡಿದ ಪಾಠ ಸರಿಯಾಗಿ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಆಗ್ರಹಿಸಿ ಏಕಾಂಗಿಯಾಗಿ ಧರಣಿ ಮಾಡಿ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಬಾರದು ಎಂದು ಆಗ್ರಹಿಸಿ ವಾಟಾಳ್ ನಾಗರಾಜ್ ಧರಣಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನೆ ಮುಂದೆ ಧರಣಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಮಾಡಿದ ಪಾಠ ಸರಿಯಾಗಿ ಅರ್ಥವಾಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಆಗ್ರಹಿಸಿ ಏಕಾಂಗಿಯಾಗಿ ಧರಣಿ ಮಾಡಿ ಆಗ್ರಹಿಸಿದ್ದಾರೆ.

ಪಿಯುಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಜ್ಜಾಗುತ್ತಿರುವ ಹಿನ್ನೆಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ಅವರು ಇಂದು ಸಚಿವ ಸುರೇಶ್ ಕುಮಾರ್‌ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಮಕ್ಕಳಿಗೆ ಸರಿಯಾಗಿ ಪಾಠ ಆಗಿಲ್ಲ. ಆನ್ ಲೈನ್ ಕ್ಲಾಸ್ ಗಳು ಅರ್ಥ ಆಗಿಲ್ಲ. ಗ್ರಾಮೀಣ ವಿಭಾಗದ ಮಕ್ಕಳಿಗೆ ಆನ್​ ಲೈನ್ ಕ್ಲಾಸ್ ಆರ್ಥನೇ ಆಗಿಲ್ಲ‌. ಇದರ ಮಧ್ಯ ಭಾಗದಲ್ಲಿ ಕೊರೋನಾ ಎರಡನೇ ಅಲೆಯ ಬಗ್ಗೆ ಎಲ್ಲರಿಗೂ ಭಯ ಇದೆ. ಮಕ್ಕಳಲ್ಲಿ ಹೆಚ್ಚಿನದಾಗಿ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಈ ವೇಳೆ ಮಕ್ಕಳಿಗೆ ಪರೀಕ್ಷೆ ಮಾಡುವುದು ತಪ್ಪು‌. ಪಿಯುಸಿ ಪರೀಕ್ಷೆಯನ್ನ ನಡೆಸೋದು ಬೇಡಾ ಅಂತ ವಾಟಾಳ್ ನಾಗಾರಾಜ್ ಏಕಾಂಗಿಯಾಗಿ ಪ್ರತಿಭಟನೆ ಮಾಡಿದರು.

(Vatal Nagaraj demands not to conduct SSLC and PUC Exam 2021)