ಈ ಬಾರಿ ಉತ್ತಮ ಮಳೆ ಇದೆ: ರೈತರಿಗೆ ಆತ್ಮ ಸ್ಥೈರ್ಯ ತುಂಬಿದ ಮಂತ್ರಾಲಯ ಶ್ರೀ

Edited By:

Updated on: Jul 05, 2023 | 2:19 PM

ಮಳೆ ಇಲ್ಲದೇ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆತ್ಮ ಸ್ಥೈರ್ಯ ತುಂಬಿದ್ದಾರೆ.

ರಾಯಚೂರು: ಜೂನ್​​ನಲ್ಲಿ ಕೈಕೊಟ್ಟು ರೈತರನ್ನು ಕಂಗಾಲು ಮಾಡಿದ್ದ ಮಳೆ ಇದೀಗ ಜುಲೈ ಆರಂಭವಾಗುತ್ತಿದ್ದಂತೆಯೇ ರಾಜ್ಯದೆಲ್ಲೆಡೆ ವರುಣನ ಅಬ್ಬರ ಜೋರಾಗಿದೆ. ಇನ್ನು ಉತ್ತರ ಕರ್ನಾಟಕದ ಕೆಲವೆಡೆ ಮಳೆ ಇಲ್ಲದೇ ರೈತರು ಬಿತ್ತನೆ ಮಾಡದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಇದೀಗ ಈ ರೈತರಿಗೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆತ್ಮ ಸ್ಥೈರ್ಯ ತುಂಬಿದ್ದಾರೆ. ಈ ಬಾರಿ ಉತ್ತಮ ಮಳೆ ಇದೆ. ದೇಶದ ಬೆನ್ನೆಲುಬು ಆಗಿರುವ ರೈತಾಪಿ ಜನ ಕಂಗೇಡುವುದು ಬೇಡ. ಅಧೈರ್ಯವಾಗಿರೋದು ಬೇಡ. ನಾವೆಲ್ಲರೂ ಆಶಾವಾದಿಗಳಾಗೋಣ. ಭಗವಂತನನ್ನ ನಂಬೋಣ. ಉತ್ತಮ ಮಳೆ ಆಗತ್ತೆ,ಬೆಳೆ ಆಗತ್ತೆ.. ಆ ಮೂಲಕ ರೈತಾಪಿ ಜನ ಆತ್ಮ ಧೈರ್ಯ ಕಳೆದುಕೊಳ್ಳಬಾರದು ಎಂದು ಡಾ.ಸುಬುಧೇಂದ್ರ ತೀರ್ಥರು ರೈತರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ.

Published on: Jul 05, 2023 02:18 PM
Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More