ಜನಾರ್ಧನ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿರುವ ಮಾನ್ವಿ ಜೆಡಿ(ಎಸ್) ಶಾಸಕ ರಾಜಾ ವೆಂಕಟಪ್ಪ ನಾಯಕ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2022 | 3:33 PM

ಗುರುವಾರದಂದು ಮಾನ್ವಿಯ ಜೆಡಿ(ಎಸ್) ಶಾಸಕ ರಾಜಾ ವೆಂಕಟಪ್ಪ ನಾಯಕ್ ಅವರು ಭೇಟಿ ನೀಡಿದರು. ರೆಡ್ಡಿ ಮತ್ತು ನಾಯಕ್ ನಡುವೆ ಏನು ಚರ್ಚೆ ನಡೆಯಿತು ಅನ್ನೋದು ಬಹಿರಂಗಗೊಂಡಿಲ್ಲ.

ಕೊಪ್ಪಳ:  ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು (Gali Janardhan Reddy) ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವುದು ಸತ್ಯ. ತಮ್ಮ ವಾಸ್ತವ್ಯವನ್ನು ಗಂಗಾವತಿಗೆ ಶಿಫ್ಟ್ ಮಾಡಿದ ಬಳಿಕ ಅವರ ಅರಮನೆಯಂಥ ಮನೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬೇರೆ ಬೇರೆ ಪಕ್ಷಗಳ ನಾಯಕರು ರೆಡ್ಡಿಯವರ ಮನೆಗೆ ಎಡತಾಕುತ್ತಿರುವುದು ಕುತೂಹಲ ಮೂಡಿಸುತ್ತಿದೆ. ಗುರುವಾರದಂದು ಮಾನ್ವಿಯ (Manvi) ಜೆಡಿ(ಎಸ್) ಶಾಸಕ ರಾಜಾ ವೆಂಕಟಪ್ಪ ನಾಯಕ್ (Raja Venkatappa Nayak) ಅವರು ಭೇಟಿ ನೀಡಿದರು. ರೆಡ್ಡಿ ಮತ್ತು ನಾಯಕ್ ನಡುವೆ ಏನು ಚರ್ಚೆ ನಡೆಯಿತು ಅನ್ನೋದು ಬಹಿರಂಗಗೊಂಡಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ