Vedha Kannada Movie: ಆಟೋಗಳ ಸಾಲಿನಿಂದ ಮೂಡಿಬಂತು ‘ವೇದ’ ಸಿನಿಮಾ ಟೈಟಲ್
Shivarajkumar | Vedha: ಅನೇಕ ಆಟೋಗಳನ್ನು ಸಾಲಾಗಿ ನಿಲ್ಲಿಸಿ ‘ವೇದ’ ಚಿತ್ರದ ಶೀರ್ಷಿಕೆ ರಚಿಸಲಾಗಿದೆ. ಈ ಸಿನಿಮಾಗೆ ಅದ್ದೂರಿ ಸ್ವಾಗತ ನೀಡಲು ‘ಸೆಂಚುರಿ ಸ್ಟಾರ್’ ಅಭಿಮಾನಿಗಳು ಸಜ್ಜಾಗಿದ್ದಾರೆ.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ನಟನೆಯ ‘ವೇದ’ ಸಿನಿಮಾ ಡಿ.23ರಂದು ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಎ. ಹರ್ಷ (A Harsha) ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ನೋಡಿದ ಅಭಿಮಾನಿಗಳ ಮನದಲ್ಲಿ ಸಖತ್ ನಿರೀಕ್ಷೆ ಮೂಡಿದೆ. ಬಿಡುಗಡೆಯ ಹೊಸ್ತಿಲಿನಲ್ಲಿ ಭರ್ಜರಿಯಾಗಿ ಪ್ರಚಾರ ನೀಡಲಾಗುತ್ತಿದೆ. ಅನೇಕ ಆಟೋಗಳನ್ನು ಸಾಲಾಗಿ ನಿಲ್ಲಿಸಿ ‘ವೇದ’ ಚಿತ್ರದ ಶೀರ್ಷಿಕೆ ರಚಿಸಲಾಗಿದೆ. ಈ ರೀತಿಯ ಹಲವಾರು ಪ್ರಯತ್ನಗಳ ಮೂಲಕ ‘ವೇದ’ (Vedha Movie) ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಲು ‘ಸೆಂಚುರಿ ಸ್ಟಾರ್’ ಅಭಿಮಾನಿಗಳು ಸಜ್ಜಾಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 22, 2022 05:05 PM
Latest Videos