ಕ್ರಿಸ್​ಮಸ್​ಗೆ ಧಮಾಕಾ; ‘ವೇದ’ ಚಿತ್ರದ ಜತೆ ಸ್ಪರ್ಧೆಗೆ ಇಳಿದ ಸಿನಿಮಾಗಳಿವು

2022 ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾಗಿದೆ. ಹಲವು ಸಿನಿಮಾಗಳು ಗೆದ್ದು ಬೀಗಿವೆ. ಈಗ ಈ ವರ್ಷ ಕೊನೆಯಾಗುತ್ತಿದೆ. ಈ ಸಂದರ್ಭದಲ್ಲಿ ಒಂದು ಹಿಟ್ ಚಿತ್ರ ಸಿಗಲಿ ಎಂದು ಕನ್ನಡದ ಚಿತ್ರ ಪ್ರೇಮಿಗಳು ಆಶಿಸುತ್ತಿದ್ದಾರೆ.

ಕ್ರಿಸ್​ಮಸ್​ಗೆ ಧಮಾಕಾ; ‘ವೇದ’ ಚಿತ್ರದ ಜತೆ ಸ್ಪರ್ಧೆಗೆ ಇಳಿದ ಸಿನಿಮಾಗಳಿವು
‘ವೇದ’ ಚಿತ್ರದ ಜತೆ ಸ್ಪರ್ಧೆಗೆ ಇಳಿದ ಸಿನಿಮಾಗಳಿವು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 22, 2022 | 12:22 PM

ಕ್ರಿಸ್​ಮಸ್ ಸಂದರ್ಭ ಚಿತ್ರರಂಗದ ಪಾಲಿಗೆ ವಿಶೇಷ. ಹೊಸ ವರ್ಷವನ್ನು ಸ್ವಾಗತಿಸಲು ರೆಡಿ ಆಗುವ ಈ ಸಂದರ್ಭಕ್ಕೆ ಸರಿಯಾಗಿ ಥಿಯೇಟರ್​ನಲ್ಲಿ ದೊಡ್ಡ ಬಜೆಟ್​ನ ಹಲವು ಸಿನಿಮಾಗಳು ರಿಲೀಸ್ ಆಗುತ್ತವೆ. ಈ ಬಾರಿಯೂ ಅದು ಮುಂದುವರಿದೆ. ಶಿವರಾಜ್​ಕುಮಾರ್ (Shivarajkumar) ನಟನೆಯ ‘ವೇದ’ (Vedha Movie) ಸೇರಿ ಹಲವು ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲೂ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಎಲ್ಲಾ ಚಿತ್ರಗಳ ಶೈಲಿ ಬೇರೆ ಬೇರೆ ರೀತಿಯಲ್ಲಿದೆ.

‘ವೇದ’ ಚಿತ್ರ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ. ಶಿವರಾಜ್​ಕುಮಾರ್ ಅವರು ಭಿನ್ನ ಗೆಟಪ್ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಗಮನ ಸೆಳೆದಿದೆ. 2022 ಕನ್ನಡ ಚಿತ್ರರಂಗದ ಪಾಲಿಗೆ ವಿಶೇಷವಾಗಿದೆ. ಹಲವು ಸಿನಿಮಾಗಳು ಗೆದ್ದು ಬೀಗಿವೆ. ಈಗ ಈ ವರ್ಷ ಕೊನೆಯಾಗುತ್ತಿದೆ. ಈ ಸಂದರ್ಭದಲ್ಲಿ ಒಂದು ಹಿಟ್ ಚಿತ್ರ ಸಿಗಲಿ ಎಂದು ಕನ್ನಡದ ಚಿತ್ರ ಪ್ರೇಮಿಗಳು ಆಶಿಸುತ್ತಿದ್ದಾರೆ. ಎ. ಹರ್ಷ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ 4ನೇ ಚಿತ್ರ ಇದಾಗಿದೆ. ಈ ಕಾರಣದಿಂದಲೂ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ.

ಕನ್ನಡದ ‘ಹೊಸ ದಿನಚರಿ’ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್​, ದೀಪಕ್ ಸುಬ್ರಹ್ಮಣ್ಯ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕೀರ್ತಿ ಶೇಖರ್ ಹಾಗೂ ವಿಶಾಕ್ ಪುಷ್ಪಲತಾ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗಂಗಾಧರ್ ಸಾಲಿಮಠ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Shivarajkumar: ‘ವೇದ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ನಿರ್ಮಾಪಕಿ ಗೀತಾ ಶಿವರಾಜ್​ಕುಮಾರ್​

ತೆಲುಗಿನಲ್ಲಿ ‘ಧಮಾಕಾ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರಕ್ಕೆ ರವಿತೇಜಾ ಹೀರೋ. ಕನ್ನಡದ ಶ್ರೀಲೀಲಾ ಈ ಚಿತ್ರದ ನಾಯಕಿ. ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಸಿನಿಮಾ ಕೂಡ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಡಬಲ್ ರೋಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲು ಸಾಲು ಸೋಲುಗಳಿಂದ ರಣವೀರ್ ಕಂಗೆಟ್ಟಿದ್ದಾರೆ. ವರ್ಷಾಂತ್ಯಕ್ಕೆ ಅವರು ದೊಡ್ಡ ಗೆಲುವನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರದ ಭವಿಷ್ಯವನ್ನು ಶುಕ್ರವಾರ ಪ್ರೇಕ್ಷಕರು ನಿರ್ಧಾರ ಮಾಡಲಿದ್ದಾರೆ. ತೆಲುಗಿನಲ್ಲಿ ‘18 ಪೇಜಸ್​’, ಮಲಯಾಳಂನಲ್ಲಿ ‘ಓ‌ ಮೇರಿ ಲೈಲಾ’, ತಮಿಳಲ್ಲಿ ‘ಎಂಜಾಯ್’  ಮೊದಲಾದ ಸಿನಿಮಾಗಳು ತೆರೆಗೆ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ