ಮರಿಸ್ವಾಮಿ ಮನೆಯೇ ನನಗೆ ಅದೃಷ್ಟದ ನಿವಾಸ, 2 ಬಾರಿ ಮುಖ್ಯಮಂತ್ರಿಯಾಗಲು ಇದೇ ಕಾರಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿರುವ ತಮ್ಮ ಹೊಸ ಮನೆಯ ಗೃಹಪ್ರವೇಶವನ್ನು ಡಿಸೆಂಬರ್‌ನಲ್ಲಿ ಮಾಡುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ತಾವು ಮರಿಸ್ವಾಮಿ ಮನೆಯಲ್ಲಿ ವಾಸಿಸುತ್ತಿದ್ದು, ಈ ನಿವಾಸವು ತಮಗೆ ಅದೃಷ್ಟ ತಂದಿದೆ ಎಂದು ಬಣ್ಣಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಅದೃಷ್ಟ ಒದಗಿ ಬಂದಿದೆ ಮರಿಸ್ವಾಮಿ ಅವರನ್ನು ತಮ್ಮ "ಅನ್ನದಾತ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ಮೈಸೂರಿನಲ್ಲಿ ತಮ್ಮ ಹೊಸ ಮನೆಯ ಗೃಹಪ್ರವೇಶ ಬಗ್ಗೆ ಹಾಗೂ ಮೈಸೂರಿಗೆ ಬಂದಾಗ ಉಳಿದುಕೊಳ್ಳು ಏನು ವ್ಯವಸ್ಥೆ ಮಾಡಿಕೊಂಡಿರುವ ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಸಾಮಾನ್ಯವಾಗಿ ಮುಖ್ಯಮಂತ್ರಿಗಳು ಒಂದು ಜಿಲ್ಲೆಗೆ ಭೇಟಿ ನೀಡಿದಾಗ ಐಷಾರಾಮಿ ಹೋಟೆಲ್ ಅಥವಾ ಐಬಿಯಂತಹ ವ್ಯವಸ್ಥೆ ಇರುತ್ತಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಇದಕ್ಕೆ ಭಿನ್ನವಾಗಿದ್ದರು. ಅವರ ಹೊಸ ಮನೆ ನಿರ್ಮಾಣ ಹಂತದಲ್ಲಿದ್ದು, ಡಿಸೆಂಬರ್‌ನಲ್ಲಿ ಗೃಹಪ್ರವೇಶ ನಡೆಸಲು ನಿರ್ಧರಿಸಲಾಗಿದೆ. ಮನೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ, ಮನೆ ಪೂರ್ಣಗೊಂಡ ನಂತರ ಅಲ್ಲಿಗೆ ಸ್ಥಳಾಂತರವಾಗುತ್ತೇನೆ ಎಂದು ಹೇಳಿದ್ದಾರೆ. ಇದರ ಜತೆಗೆ ಮೈಸೂರಿಗೆ ಬಂದರೆ ಯಾರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ ಎಂಬ ಬಗ್ಗೆಯೂ ಹೇಳಿದ್ದಾರೆ. ಮರಿಸ್ವಾಮಿ ಎಂಬುವವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದು ನನ್ನ ಅದೃಷ್ಟದ ಮನೆ ಎಂದು ಹೇಳಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವ ಅದೃಷ್ಟ ಒದಗಿ ಬಂದಿದೆ ಮರಿಸ್ವಾಮಿ ಅವರನ್ನು ತಮ್ಮ “ಅನ್ನದಾತ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ನಾನು, ನನ್ನ ಸ್ನೇಹಿತರು, ನನ್ನ ಮಗ ಬಂದ್ರೆ, ಎಲ್ಲರಿಗೂ ಊಟ ಹಾಕೋನು ಅವನೇ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

