Daily Devotional: ಮನೆ ಕಟ್ಟಿ ಮದುವೆ ಮಾಡಬೇಕಾ ಅಥವಾ ಮದುವೆ ಮಾಡಿ ಮನೆ ಕಟ್ಟಬೇಕಾ?

Updated on: Aug 15, 2025 | 7:02 AM

ಮದುವೆ ಮತ್ತು ಮನೆ ನಿರ್ಮಾಣದ ವಿಚಾರವಾಗಿ ಖ್ಯಾತ ಗುರೂಜಿ ತಿಳಿಸಿದ್ದಾರೆ. ಧರ್ಮಶಾಸ್ತ್ರಗಳು ಮೊದಲು ಮನೆ ಕಟ್ಟುವುದು ಶುಭವೆನ್ನಲಾಗುತ್ತೆದೆ. ಆದರೆ, ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಒಂದೇ ವರ್ಷದಲ್ಲಿ ಎರಡನ್ನೂ ಮಾಡದಿರುವುದು ಉತ್ತಮ ಎಂದು ತಿಳಿಸಲಾಗಿದೆ. ಸಂಪೂರ್ಣ ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 15: ಮದುವೆ ಮಾಡಿ ಮನೆ ಕಟ್ಟಬೇಕೋ ಅಥವಾ ಮನೆ ಕಟ್ಟಿ ಮದುವೆ ಮಾಡಬೇಕೋ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ, ಸ್ವಂತ ಮನೆಯಲ್ಲಿ ಜೀವನ ಕೊನೆಗೊಳಿಸುವುದು ಶುಭಕರ. ಆದ್ದರಿಂದ ಮೊದಲು ಮನೆ ಕಟ್ಟುವುದು ಉತ್ತಮ ಎಂದು ಹಿರಿಯರು ಹೇಳುತ್ತಾರೆ. ಒಂದೇ ವರ್ಷದಲ್ಲಿ ಮದುವೆ ಮತ್ತು ಮನೆ ಕಟ್ಟುವಿಕೆ ಎರಡನ್ನೂ ಮಾಡುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಆರ್ಥಿಕವಾಗಿ ಇದು ಒತ್ತಡವನ್ನು ಉಂಟುಮಾಡಬಹುದು. ಅಂತಿಮವಾಗಿ, ನಿಮ್ಮ ಕುಟುಂಬದ ಪರಿಸ್ಥಿತಿ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದ್ದಾರೆ.