“ನನ್ನ ಗಂಡ ಗಂಡಸೇ ಅಲ್ಲ”: ಸಂಸಾರ ಹಾಳಾಗಲು ಪ್ರಜ್ವಲ್ ಕಾರಣ ಎಂದ ಮೋನಿಕಾ

Updated on: Dec 13, 2025 | 10:50 PM

ಕಾನ್ಸ್​ಟೇಬಲ್ ಜೊತೆ ಪರಾರಿ ಪ್ರಕರಣದಲ್ಲಿ, ಗೃಹಿಣಿ ಮೋನಿಕಾ ತಮ್ಮ ಸಂಸಾರ ಹಾಳಾಗಲು ಪತಿಯ ಸ್ನೇಹಿತ ಪ್ರಜ್ವಲ್ ಮುಖ್ಯ ಕಾರಣ ಎಂದಿದ್ದಾರೆ. ಪ್ರಜ್ವಲ್ ವಿಚ್ಛೇದನ ಪಡೆಯಲು ಸಲಹೆ ನೀಡಿದ್ದರು. ನಾಗೇಂದ್ರ ಎಂಬಾತ ತನ್ನ ಮೇಲೆ ಹಲ್ಲೆ ಮಾಡಿದ್ದ ಎಂದಿರುವ ಮೋನಿಕಾ, ಪತಿಯು ತಮ್ಮ ಆಭರಣ ಮತ್ತು ಹಣದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾಳೆ. ಈ ಪ್ರಕರಣದಲ್ಲಿ ಕಾನ್ಸ್​ಟೇಬಲ್ ರಾಘವೇಂದ್ರ ಅವರ ಯಾವುದೇ ತಪ್ಪಿಲ್ಲ ಎಂದಿದ್ದಾಳೆ.

ಬೆಂಗಳೂರು, ಡಿ.13: ಕಾನ್ಸ್​ಟೇಬಲ್ ಜೊತೆ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೋನಿಕಾ ತಮ್ಮ ವೈವಾಹಿಕ ಜೀವನ ಹಾಳಾಗಲು ಪತಿಯ ಸ್ನೇಹಿತ ಪ್ರಜ್ವಲ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾಳೆ. ಪ್ರಜ್ವಲ್ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ತನಗೆ ವಿಚ್ಛೇದನ ಪಡೆಯುವಂತೆ ಸಲಹೆ ನೀಡಿದ್ದ ಎಂದು ಮೋನಿಕಾ ತಿಳಿಸಿದ್ದಾಳೆ. ನಾಗೇಂದ್ರ ಎಂಬ ಪತಿಯ ಸ್ನೇಹಿತ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿಯೂ ಹೇಳಿದ್ದಾಳೆ. ಮೋನಿಕಾ ಅವರು ತಮ್ಮ ತಂದೆ ನೀಡಿದ್ದ 4 ಲಕ್ಷ ರೂಪಾಯಿ ಚೆಕ್ ಮತ್ತು 1 ಲಕ್ಷ ರೂಪಾಯಿ ನಗದಿನಿಂದ ರಾಜೇಶ್ ಜ್ವೆಲ್ಸ್‌ನಲ್ಲಿ ಚಿನ್ನಾಭರಣ ಖರೀದಿಸಿದ್ದ, ಇದಲ್ಲದೆ, ಮೈಸೂರಿನಲ್ಲಿ ಮಾಡಿಸಿದ್ದ ಮಾಂಗಲ್ಯ ಚೈನ್ ಮತ್ತು ಮೂರು ಉಂಗುರಗಳನ್ನು ಹೊರತುಪಡಿಸಿ ಮನೆಯಲ್ಲಿ ಬೇರೆ ಯಾವುದೇ ಒಡವೆ ಇರಲಿಲ್ಲ . ತನ್ನ ಮನೆಯಲ್ಲಿದ್ದ ಒಡವೆ ಹಾಗೂ ಹಣದ ಬಗ್ಗೆ ಪತಿಯು ತಪ್ಪು ನೀಡಿದ್ದಾನೆ. ತಮ್ಮ ಮಗುವಿನ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುವುದಾಗಿ ಮೋನಿಕಾ ತಿಳಿಸಿದ್ದಾಳೆ. ಈ ಪ್ರಕರಣದಲ್ಲಿ ಕಾನ್ಸ್​ಟೇಬಲ್ ರಾಘವೇಂದ್ರ ಅವರ ಯಾವುದೇ ತಪ್ಪಿಲ್ಲ. ಅವರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ತಮಗೆ ಯಾವುದೇ ತೊಂದರೆ ಉಂಟಾದರೆ ಅದಕ್ಕೆ ಮಂಜುನಾಥ್, ಪ್ರಜ್ವಲ್ ಮತ್ತು ನಾಗೇಂದ್ರ ಅವರೇ ಕಾರಣ ಎಂದು ಮೋನಿಕಾ ಹೇಳಿದ್ದಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ