‘ಮಾರ್ಟಿನ್’ ಸಿನಿಮಾ ಕಮೀಷನ್ ವಿವಾದ, ಧ್ರುವ ಸರ್ಜಾ ಮೊದಲ ಪ್ರತಿಕ್ರಿಯೆ

|

Updated on: Jul 30, 2024 | 7:29 PM

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ವರ್ಷಗಳ ಚಿತ್ರೀಕರಣದ ಬಳಿಕ ಕೊನೆಗೂ ಬಿಡುಗಡೆಗೆ ರೆಡಿಯಾಗಿದೆ. ಇಂಥಹಾ ಸಮಯದಲ್ಲಿ ಸಿನಿಮಾ ವಿವಾದಕ್ಕೆ ಸಹ ಸಿಲುಕಿಕೊಂಡಿದೆ. ವಿವಾದದ ಬಗ್ಗೆ ಮೊದಲ ಬಾರಿಗೆ ನಟ ಧ್ರುವ ಸರ್ಜಾ ಮಾತನಾಡಿದ್ದಾರೆ.

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಸೆಟ್ಟೇರಿ ವರ್ಷಗಳೇ ಕಳೆದು ಹೋಗಿವೆ. ನಾ-ನಾ ಅಡೆತಡೆಗಳ ಬಳಿಕ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಆದರೆ ಈಗ ಸಿನಿಮಾ ವಿವಾದದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ನಿರ್ಮಾಪಕ ಉದಯ್ ಮೆಹ್ತ, ತಮಗೆ ಸಿಜಿಐ ಕಂಪೆನಿಯೊಂದು 2.50 ಕೋಟಿ ಮೋಸ ಮಾಡಿದೆ ಎಂದು ಆರೋಪಿಸಿದ್ದು, ದೂರಿನ ಅನ್ವಯ ಕೆಲವರನ್ನು ಬಂಧಿಸಿ ವಿಚಾರಣೆಯನ್ನೂ ನಡೆಸಲಾಗಿದೆ. ಪ್ರಕರಣದಲ್ಲಿ ಸಿನಿಮಾದ ನಿರ್ದೇಶಕ ಎಪಿ ಅರ್ಜುನ್ ಹೆಸರು ಸಹ ಕೇಳಿ ಬಂದಿದೆ. ನಿರ್ಮಾಪಕರಿಂದ ಗ್ರಾಫಿಕ್ಸ್​ ಸಂಸ್ಥೆಗೆ ಹೋದ ಹಣದಲ್ಲಿ ಕಮೀಷನ್ ಅನ್ನು ಎಪಿ ಅರ್ಜುನ್ ಪಡೆದಿದ್ದರು ಎಂಬ ಆರೋಪವಿದೆ. ಇದೆಲ್ಲದರ ನಡುವೆ ಇದೇ ಮೊದಲ ಬಾರಿಗೆ ‘ಮಾರ್ಟಿನ್’ ಸಿನಿಮಾದ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ