ವಯನಾಡನ್ನು ಬೆಚ್ಚಿಬೀಳಿಸಿದ ಭೂಕುಸಿತ; ರಾತ್ರಿ ಬೆಳಗಾಗುವುದರೊಳಗೆ ಎಲ್ಲ ನೆಲಸಮ

ವಯನಾಡನ್ನು ಬೆಚ್ಚಿಬೀಳಿಸಿದ ಭೂಕುಸಿತ; ರಾತ್ರಿ ಬೆಳಗಾಗುವುದರೊಳಗೆ ಎಲ್ಲ ನೆಲಸಮ

ರಶ್ಮಿ ಕಲ್ಲಕಟ್ಟ
|

Updated on: Jul 30, 2024 | 4:28 PM

ಭಾರೀ ಮಳೆಯ ರಾತ್ರಿಯಲ್ಲಿ ಏನಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ. ಅವರು ಆಘಾತದಿಂದ ಎಚ್ಚರಗೊಂಡಾಗ, ಅನೇಕ ಜನರು ಮಣ್ಣಿನಲ್ಲಿ ಹೂತು ಹೋಗಿದ್ದರು. 2:30ಕ್ಕೆ ಭೂಕುಸಿತದ ಬಗ್ಗೆ ಜನರಿಗೆ ಗೊತ್ತಾಗಿದ್ದು. ಭಾರೀ ಮಳೆ ಮತ್ತು ಕತ್ತಲೆಯಿಂದಾಗಿ, ಏನಾಯಿತು ಅಥವಾ ಅನಾಹುತದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ

ಮಧ್ಯರಾತ್ರಿ ಕುಸಿದ ಗುಡ್ಡ, ಜತೆಗೆ ಜೋರು ಮಳೆ… ಕೇರಳದ ವಯನಾಡಿನ ಚೂರಲ್​​ಮಲದಲ್ಲಿ ಕೇಳಿಸಿದ್ದು ಜನರ ಆಕ್ರಂದನ. ರಾತ್ರಿ ಬೆಳಗಾಗುವುದರೊಳಗೆ ಇಡೀ ಭೂಪ್ರದೇಶವೇ ಮಣ್ಣಿನಡಿಯಲ್ಲಿತ್ತು. ‘ಯಾರಾದರೂ ಬಂದು ಕಾಪಾಡಿ, ಉಸಿರಾಡಲು ಆಗುತ್ತಿಲ್ಲ, ನೆಲದಡಿಯಲ್ಲಿ ಇದ್ದೇವೆ’ ಹಲವಾರು ಮಂದಿ ಕೂಗುತ್ತಿದ್ದರು. ಇನ್ನೊಂದೆಡೆ ತಮ್ಮ ಕುಟುಂಬ ಸದಸ್ಯರನ್ನು ಕಾಪಾಡಲು ಹೆಣಗಾಡುವ ಮನುಷ್ಯರು.
“ಯಾರಾದರೂ ಓಡಿ ಬನ್ನಿ, ನಾವು ನಮ್ಮ ಮನೆಗೆ ಹೋಗಿ ನಮ್ಮೊಂದಿಗೆ ಇರುವವರನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ. ಅವರು ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ, ಹೇಗಾದರೂ ಮಾಡಿ ಅವರನ್ನು ಉಳಿಸಬೇಕು ಎಂದು ಗೃಹಿಣಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಭಾರೀ ಮಳೆಯ ರಾತ್ರಿಯಲ್ಲಿ ಏನಾಯಿತು ಎಂದು ಯಾರಿಗೂ ಅರ್ಥವಾಗಲಿಲ್ಲ. ಅವರು ಆಘಾತದಿಂದ ಎಚ್ಚರಗೊಂಡಾಗ, ಅನೇಕ ಜನರು ಮಣ್ಣಿನಲ್ಲಿ ಹೂತು ಹೋಗಿದ್ದರು. 2:30ಕ್ಕೆ ಭೂಕುಸಿತದ ಬಗ್ಗೆ ಜನರಿಗೆ ಗೊತ್ತಾಗಿದ್ದು. ಭಾರೀ ಮಳೆ ಮತ್ತು ಕತ್ತಲೆಯಿಂದಾಗಿ, ಏನಾಯಿತು ಅಥವಾ ಅನಾಹುತದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲಿದ್ದದ್ದು ಕೆಸರು, ಕೊಚ್ಚಿ ಹೋಗುತ್ತಿದ್ದ ಮೃತದೇಹಗಳು ಮತ್ತು ಬರೀ ನೀರು ಮಾತ್ರ!.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ