ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Aug 11, 2026 | 6:18 AM

ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 11ರ ದ್ವಾದಶ ರಾಶಿಗಳ ದಿನಭವಿಷ್ಯವನ್ನು ನೀಡಿದ್ದಾರೆ. ಈ ಮಂಗಳವಾರದಂದು ಗ್ರಹಗಳ ಸಂಚಾರ, ಗಜಕೇಸರಿ ಮಹಾಯೋಗದ ಪ್ರಭಾವ ಹಾಗೂ ಪುನರ್ವಸು ನಕ್ಷತ್ರದ ವಿಶೇಷತೆಗಳನ್ನು ವಿವರಿಸುತ್ತಾ, ಮೇಷ ಮತ್ತು ವೃಷಭ ರಾಶಿಗಳ ಆರ್ಥಿಕ, ವೈವಾಹಿಕ ಮತ್ತು ಆರೋಗ್ಯದ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ.

ಇಂದು 2026ರ ಆಗಸ್ಟ್ 11, ಪರಾಭವ ನಾಮ ಸಂವತ್ಸರ, ಆಷಾಢ ಮಾಸ, ಕೃಷ್ಣ ಪಕ್ಷ ಚತುರ್ದಶಿ ಹಾಗೂ ಪುನರ್ವಸು ನಕ್ಷತ್ರ ಇದೆ. ಮಂಗಳವಾರದಂದು ಸುಬ್ರಮಣ್ಯ ಸ್ವಾಮಿ ಮತ್ತು ಹನುಮನ ಕೃಪೆಗೆ ಪಾತ್ರರಾಗಲು ಅವಕಾಶವಿದೆ. ಇಂದು ಮಾಸ ಶಿವರಾತ್ರಿ ಹಾಗೂ ಚಡಚಣ ಸಂಗಮೇಶ್ವರ ಉತ್ಸವವೂ ಜರುಗಲಿದೆ. ರವಿ ಮತ್ತು ಚಂದ್ರ ಕರ್ಕಾಟಕ ರಾಶಿಯಲ್ಲಿ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಗುರು ಸಹ ಅಲ್ಲಿಯೇ ಇರುವುದರಿಂದ ಇದು ಗಜಕೇಸರಿ ಮಹಾಯೋಗವನ್ನು ಸೃಷ್ಟಿಸಿದೆ. ರಾಹುಕಾಲ ಮಧ್ಯಾಹ್ನ 3 ಗಂಟೆ 23 ನಿಮಿಷದಿಂದ 5 ಗಂಟೆ 4 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವು ಬೆಳಗ್ಗೆ 10 ಗಂಟೆ 50 ನಿಮಿಷದಿಂದ ಮಧ್ಯಾಹ್ನ 12 ಗಂಟೆ 24 ನಿಮಿಷದ ತನಕ ಇದೆ. ಇಂದಿನ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More