Karnataka Assembly Polls Results: ಮೈಸೂರಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮ, ಮಂಗಳಮಖಿಯರಿಗೆ ಹಣ ನೀಡಿದ ಮಾಜಿ ಮುಖ್ಯಮಂತ್ರಿ!

|

Updated on: May 13, 2023 | 5:52 PM

ಕೆಲ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ರಾಮಣ್ಣಂಗೆ ಜೈ ಅಂತಲೂ ಕೂಗುತ್ತಿದ್ದರು

ಮೈಸೂರು: ಸಿದ್ದರಾಮಯ್ಯನವರ (Siddaramaiah) ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಪದಗಳಲ್ಲಿ ಹೇಳಲಾಗದು ಅನಿಸುತ್ತದೆ. ಜನ ಆವೇಶದಲ್ಲಿ ಸಿದ್ರಾಮಣ್ಣಂಗೆ ಜೈ, ಯತೀಂದ್ರಣ್ಣಂಗೆ (Yathindra Siddaramaiah) ಜೈ ಅಂತ ಕೂಗುತ್ತಿಲ್ಲ, ಅರಚುತ್ತಿದ್ದ್ದಾರೆ. ಸಿದ್ದರಾಮಯ್ಯ ಮನೆಯಿಂದ ಹೊರಬಂದು ಕಾರು ಹತ್ತಲು ಸಹ ಜನ ಬಿಡುತ್ತಿಲ್ಲ. ಅವರನ್ನು ಅಭಿನಂದಿಸಲು ಮಂಗಳಮುಖಿಯರು (transgenders) ಸಹ ಬಂದಿದ್ದಾರೆ. ವೈಯಕ್ತಿಕ ಗೆಲುವು ಮತ್ತು ಪಕ್ಷದ ಅಮೋಘ ಸಾಧನೆಯಿಂದ ಬೀಗುತ್ತಿರುವ ಸಿದ್ದರಾಮಯ್ಯ ಮಂಗಳಮುಖಿಯರಿಗೆ ಹಣ ನೀಡಿದ್ದಾರೆ. ಕೆಲ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ರಾಮಣ್ಣಂಗೆ ಜೈ ಅಂತಲೂ ಕೂಗುತ್ತಿದ್ದಾರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ