ಕಲಬುರಗಿ ಆರ್​ಟಿಒ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತೆ!

Edited By:

Updated on: Feb 05, 2026 | 12:05 PM

ಕಲಬುರಗಿ ಆರ್ಟಿಓ ಕಚೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ಲಂಚ ಪಡೆದು ಆರ್​​​ಸಿ ಕಾರ್ಡ್ ಸೇರಿದಂತೆ ಸರ್ಕಾರಿ ದಾಖಲೆಗಳನ್ನು ವಿತರಿಸುತ್ತಿರುವುದನ್ನು ‘ಟಿವಿ9’ ಬಯಲಿಗೆಳೆದಿದೆ. ಪ್ರತಿ ಕಾರ್ಡ್‌ಗೆ 200-300 ರೂಪಾಯಿ ಲಂಚ ಪಡೆದು ಅನರ್ಹರಿಗೂ ದಾಖಲೆ ನೀಡುವ ಭ್ರಷ್ಟಾಚಾರ ಬಯಲಾಗಿದ್ದು, ಈ ಬಗ್ಗೆ ಸಾರಿಗೆ ಸಚಿವರ ಗಮನಿಸಿ ಕ್ರಮ ಕೈಗೊಳ್ಳಬೇಕಾಗಿದೆ.

ಕಲಬುರಗಿ, ಫೆಬ್ರವರಿ 5: ಕಲಬುರಗಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್ಟಿಓ) ನಡೆಯುತ್ತಿರುವ ಭ್ರಷ್ಟಾಚಾರವನ್ನು ‘ಟಿವಿ9’ ಸುದ್ದಿ ವಾಹಿನಿ ಬಯಲು ಮಾಡಿದೆ. ಆರ್​​ಟಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಮತ್ತು ದಾಖಲೆಗಳನ್ನು ಅನಧಿಕೃತವಾಗಿ ವಿತರಿಸುತ್ತಿರುವುದು ಬಹಿರಂಗವಾಗಿದೆ. ಈ ಕಚೇರಿಯಲ್ಲಿ ಹಣ ನೀಡಿದರೆ ವಾಹನಗಳ ಆರ್​ಸಿ ಕಾರ್ಡ್‌ಗಳು ಸೇರಿದಂತೆ ಎಲ್ಲಾ ಸರ್ಕಾರಿ ದಾಖಲೆಗಳು ಸುಲಭವಾಗಿ ಲಭ್ಯವಾಗುತ್ತವೆ. ಅರ್ಹರಲ್ಲದವರಿಗೂ ಅಥವಾ ಅನಗತ್ಯ ವ್ಯಕ್ತಿಗಳಿಗೂ ಈ ಭೂಪರು ಸರ್ಕಾರಿ ದಾಖಲೆಗಳನ್ನು ನೀಡುತ್ತಾರೆ. ಲಂಚ ಪಡೆದು ಆರ್​​ಸಿ ಕಾರ್ಡ್‌ ವಿತರಿಸುವ ದೃಶ್ಯಾವಳಿಗಳನ್ನು ‘ಟಿವಿ9’ ಸೆರೆಹಿಡಿದಿದೆ. ಒಂದು ಆರ್​ಸಿ ಕಾರ್ಡ್‌ಗೆ 200 ರಿಂದ 300 ರೂಪಾಯಿ ಲಂಚ ಪಡೆದು ವಿತರಣೆ ಮಾಡಲಾಗುತ್ತಿರುವುದ ಬೆಳಕಿಗೆ ಬಂದಿದೆ. ಇದು ಸಾರಿಗೆ ಇಲಾಖೆಯ ಪಾರದರ್ಶಕತೆ ಮತ್ತು ದಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us