ಬಿರುಗಾಳಿ ಮಳೆಗೆ ಬಳ್ಳಾರಿ ಹೊಸ ಬಸ್ ನಿಲ್ದಾಣದ ಬಳಿ ಧರೆಗುರುಳಿದ ಬೃಹತ್ ಮರ: 15ಕ್ಕೂ ಹೆಚ್ಚು ಬೈಕ್‌ಗಳು ಜಖಂ
ಬಳ್ಳಾರಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಿರುಗಾಳಿ ಮಳೆಗೆ ಬೃಹತ್ ಮರ ಧರೆಗುರುಳಿದ ಪರಿಣಾಮ, ಅಲ್ಲಿ ಪಾರ್ಕಿಂಗ್ ಮಾಡಿದ್ದ 15ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಘಟನೆಯಿಂದ ಭಾರಿ ನಷ್ಟ ಅನುಭವಿಸದ ಪರಿಣಾಮ ಪರಿಹಾರಕ್ಕಾಗಿ ಬೈಕ್ ಮಾಲೀಕರು ಪಾರ್ಕಿಂಗ್ ಮ್ಯಾನೇಜರ್ನ ಆಗ್ರಹಿಸಿರುವ ಪ್ರಸಂಗವೂ ನಡೆದಿದೆ.
ಬಳ್ಳಾರಿ, ಏಪ್ರಿಲ್ 22: ಬಿರುಗಾಳಿ ಮಳೆಗೆ ಬೃಹತ್ ಮರ ಬಿದ್ದು 15ಕ್ಕೂ ಹೆಚ್ಚು ಬೈಕ್‌ಗಳು ಜಖಂ ಆಗಿರುವ ಘಟನೆ ಬಳ್ಳಾರಿ ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಬಸ್ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಬೃಹತ್ ಮರ ಬಿದ್ದ ಪರಿಣಾಮ ಬೈಕ್‌ಗಳು ಜಖಂಗೊಂಡಿವೆ. ನಮ್ಮ ವಾಹನಗಳು ಸೇಫ್ ಆಗಿರಲಿ ಅಂತಾ ಪಾರ್ಕಿಂಗ್ ಮಾಡಿದ್ದೆವು. ಆದರೆ ಮರ ಬಿದ್ದು ಬೈಕ್ಗಳಿಗೆ ಹಾನಿ ಆಗಿದೆ. ಹೀಗಾಗಿ ಪರಿಹಾರ ಕೊಡಿ ಎಂದು ವಾಹನ ಪಾರ್ಕಿಂಗ್ ಸ್ಥಳದ ಮ್ಯಾನೇಜರ್ನ ಬೈಕ್ಗಳ ಮಾಲೀಕರು ಆಗ್ರಹಿಸಿದ ಪ್ರಸಂಗವೂ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us