ಮುಳುಬಾಗಿಲುನ ಅಪಾರ ಜನಸ್ತೋಮದ ನಡುವೆ ರ‍್ಯಾಲಿ ನಡೆಸಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಕಾಂಗ್ರೆಸ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 06, 2024 | 4:36 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಗೋಸ್ಕರ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿದರು. ತೆರೆದ ವಾಹನದಲ್ಲಿ ಅವರಿಬ್ಬರ ಜೊತೆ ಗೌತಮ್, ಸಚಿವ ಎಂಸಿ ಸುಧಾಕರ್, ನಜೀರ್ ಅಹ್ಮದ್ ಮತ್ತು ಇನ್ನೂ ಕೆಲ ನಾಯಕರನ್ನು ನೋಡಬಹುದು.

ಕೋಲಾರ: ಜನ ನಾಲ್ಕು ದಿಕ್ಕುಗಳಿಂದ ಹರಿದುಬಂದರು ಅಂತ ಹೇಳುತ್ತಾರಲ್ಲ, ಹಾಗಿದೆ ಈ ವಿಹಂಗಮ ದೃಶ್ಯ. ರಾಜ್ಯ ಕಾಂಗ್ರೆಸ್ ನಾಯಕರು ಇಂದು ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಲೋಕಸಭಾ ಚುನಾವಣೆಗೆ ಪ್ರಚಾರ ಕಾರ್ಯವನ್ನು ಮುಳಬಾಗಿಲುನಿಂದ (Mulbagal) ಆರಂಭಿಸಿದರು. ಕೋಲಾರ ಜಿಲ್ಲೆಯ ಮುಳುಬಾಗಿಲು ದೊಡ್ಡ ಊರೇನಲ್ಲ, ಸುಮಾರು 65,000 ಜನಸಂಖ್ಯೆಯಿರುವ ತಾಲ್ಲೂಕು ಕೇಂದ್ರ. ಅದರೆ ಜನಸಾಗರ ನೋಡುತ್ತಿದ್ದರೆ ಇಡೀ ಊರಿನ ಜನ ಇಲ್ಲಿ ನೆರೆದಿದ್ದಾರೇನೋ ಅಂತ ಭಾಸವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆವಿ ಗೌತಮ್ ಗೋಸ್ಕರ (KV Gowtham ) ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿದರು. ತೆರೆದ ವಾಹನದಲ್ಲಿ ಅವರಿಬ್ಬರ ಜೊತೆ ಗೌತಮ್, ಸಚಿವ ಎಂಸಿ ಸುಧಾಕರ್, ನಜೀರ್ ಅಹ್ಮದ್ ಮತ್ತು ಇನ್ನೂ ಕೆಲ ನಾಯಕರನ್ನು ನೋಡಬಹುದು. ತಮ್ಮ ಅಳಿಯನಿಗೆ ಟಿಕೆಟ್ ಸಿಗದ ಕಾರಣ ಮುನಿಸಿಕೊಂಡಿರುವ ಸಚಿವ ಕೆಹೆಚ್ ಮುನಿಯಪ್ಪ ಅವರ ಗೈರುಹಾಜರಿ ಎದ್ದು ಕಾಣುತಿತ್ತು. ಇವತ್ತಿನ ರ‍್ಯಾಲಿ ಕಾಂಗ್ರೆಸ್ ಶಿಬಿರದಲ್ಲಿ ಹರ್ಷ ಮೂಡಿಸಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜಕಾರಣದಲ್ಲಿ ನಾನು ಎಷ್ಟು ದಿನ ಇರುತ್ತೇನೋ ಗೊತ್ತಿಲ್ಲ: ಡಿಕೆ ಶಿವಕುಮಾರ್ ಅಚ್ಚರಿ ಹೇಳಿಕೆ!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.