‘ನಾ ಕೋಳಿಕೆ ರಂಗ’ ಎನ್ನುತ್ತಾ ಬಂದ ಮಾಸ್ಟರ್ ಆನಂದ್

|

Updated on: Oct 08, 2023 | 10:35 AM

Master Anand: ಇತ್ತೀಚೆಗೆ ಧಾರಾವಾಹಿ ನಿರ್ದೇಶನದಿಂದ ದೂರಾಗಿ ಕೇವಲ ರಿಯಾಲಿಟಿ ಶೋ ನಿರೂಪಣೆಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಮಾಸ್ಟರ್ ಆನಂದ್, ಇದೀಗ ಹೊಸದೊಂದು ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಸಿನಿಮಾದ ಹೆಸರು 'ನಾ ಕೋಳಿಕೆ ರಂಗ'.

ಬಾಲನಟನಾಗಿ ಎಂಟ್ರಿ ಕೊಟ್ಟು ಸ್ಯಾಂಡಲ್​ವುಡ್​ನ ಸ್ಟಾರ್ ಬಾಲನಟನಾಗಿ ಮೆರೆದ ಮಾಸ್ಟರ್ ಆನಂದ್ (Master Anand), ದಶಕಗಳಿಂದಲೂ ಹಾಸ್ಯ ಪಾತ್ರಗಳು, ಪೋಷಕ ಪಾತ್ರ, ಆ ನಂತರ ಧಾರಾವಾಹಿಯಲ್ಲಿ ನಟನೆ, ನಿರ್ದೇಶನ, ರಿಯಾಲಿಟಿ ಶೋ, ರಿಯಾಲಿಟಿ ಶೋ ನಿರೂಪಣೆ ಹೀಗೆ ಮಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಧಾರಾವಾಹಿ ನಿರ್ದೇಶನದಿಂದ ದೂರಾಗಿ ಕೇವಲ ರಿಯಾಲಿಟಿ ಶೋ ನಿರೂಪಣೆಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಮಾಸ್ಟರ್ ಆನಂದ್, ಇದೀಗ ಹೊಸದೊಂದು ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ನಾ ಕೋಳಿಕೆ ರಂಗ’. ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಮಾಸ್ಟರ್ ಆನಂದ್ ಸಿನಿಮಾ ಹಾಗೂ ತಮ್ಮ ಸಹ ನಟರ ಬಗ್ಗೆ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ