ಪೇಮೆಂಟ್ ಇಲ್ಲದೆ ಯಾವ ಇವೆಂಟ್ಗೂ ಬರುತ್ತಿರಲಿಲ್ಲ ಮಾಸ್ಟರ್ ಆನಂದ್ ಪುತ್ರಿ
Master Anand: ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಯುವತಿ ನಿಶಾ ನರಸಪ್ಪ, ಸುದ್ದಿಗೋಷ್ಠಿ ಮಾಡಿದ್ದು ಸ್ಪಷ್ಟನೆ ನೀಡಿದ್ದು, ವಂಶಿಕಾರನ್ನು ಹಣ ಪಡೆಯದೇ ಯಾವುದೇ ಕಾರ್ಯಕ್ರಮಕ್ಕೂ ಕಳಿಸುತ್ತಿರಲಿಲ್ಲ ಎಂದಿದ್ದಾರೆ.
ಮಾಸ್ಟರ್ ಆನಂದ್ (Master Anand) ಹಾಗೂ ಯಶಸ್ವಿನಿ ಪುತ್ರಿ ವಂಶಿಕಾ (Vamshika) ಹೆಸರು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಲವರಿಗೆ ಟೋಪಿ ಹಾಕಿದ್ದಾರೆ ಎಂದು ಯುವತಿ ನಿಶಾ ನರಸಪ್ಪ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು. ಅವರ ಬಂಧನವೂ ಆಗಿತ್ತು. ಇದೀಗ ನಿಶಾ ನರಸಪ್ಪ ಸುದ್ದಿಗೋಷ್ಠಿ ನಡೆಸಿ ತಮ್ಮ ಮೇಲಿನ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಈ ಸಮಯದಲ್ಲಿ ಮಾಸ್ಟರ್ ಆನಂದ್ ಪತ್ನಿ, ವಂಶಿಕಾ ತಾಯಿ ಯಶಸ್ವಿನಿ ಮೇಲೆಯೂ ಆರೋಪಗಳನ್ನು ಮಾಡಿದ್ದು, ಹಣ ಇಲ್ಲದೆ ಯಾವ ಕಾರ್ಯಕ್ರಮಕ್ಕೂ ವಂಶಿಕಾರನ್ನು ಯಶಸ್ವಿನಿ ಕಳಿಸುತ್ತಿರಲಿಲ್ಲ. ಹಾಗಿದ್ದ ಮೇಲೆ ನಾನು ಅವರ ಮಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 30, 2023 08:24 PM
Latest Videos