ಕುಡಿದು ಅಪಘಾತ ಮಾಡಿದ ಮಯೂರ್ ಪಟೇಲ್ಗೆ ಹೆಚ್ಚಿತು ಸಂಕಷ್ಟ
ಕುಡಿದು ಅಪಘಾತ ಮಾಡಿದ ಮಯೂರ್ ಪಟೇಲ್ ಅವರಿಗೆ ಸಂಕಷ್ಟ ಹೆಚ್ಚಿದೆ. ಅವರ ವಿರುದ್ಧ ಕೇಸ್ ದಾಖಲಾಗಿದೆ. ಈ ಕೇಸ್ನಲ್ಲಿ ಮಯೂರ್ ಪಟೇಲ್ ಅವರು ಸಮಸ್ಯೆ ಎದುರಿಸೋ ಸಾಧ್ಯತೆ ಇದೆ. ಅವರು ಕಾರು ಬ್ರೇಕ್ ಫೇಲ್ ಆಗಿದೆ ಎಂದಿದ್ದಾರೆ. ಆದರೆ, ಹಾಗಿಲ್ಲ ಎನ್ನುತ್ತಿವೆ ಮಯೂರ್ ಪಟೇಲ್ ಹೇಳಿಕೆ.
ಮಯೂರ್ ಪಟೇಲ್ ಅವರು ಕುಡಿದು ಕಾರು ಅಪಘಾತ ಮಾಡಿಕೊಂಡಿದ್ದಾರೆ. ಬೆಂಗಳೂರಿನ ದೊಮ್ಮಲೂರು ಬಳಿಯ ಸಿಗ್ನಲ್ ಅಲ್ಲಿ ತಮ್ಮ ಫಾರ್ಚೂನರ್ ಕಾರನ್ನು ಯದ್ವಾ ತದ್ವಾ ಓಡಿಸಿ ಡಿಕ್ಕಿ ಹೊಡೆಸಿದ್ದಾರೆ. ಈ ಪ್ರಕರಣದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಎನ್ ಎಸ್ 281,ಮತ್ತು IMA 185 ಆ್ಯಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚಿದೆ. ಇನ್ನು, ಸಂತ್ರಸ್ತ ಕಾರು ಚಾಲಕ ಶ್ರೀನಿವಾಸ್ ಮಾತನಾಡಿದ್ದು, ಘಟನೆ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
