ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ

Updated on: Sep 26, 2024 | 9:14 PM

ನನ್ನ ಅಪ್ಪನಿಗೆ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕವಿದೆ. ಇಂತಹ 4 ಕಾಲೇಜುಗಳನ್ನು ಬೇಕಾದರೂ ನಾನು ಕಟ್ಟಬಲ್ಲೆ ಎಂದು ಕ್ಲಾಸ್​ರೂಂನಲ್ಲಿ ಮಹಿಳಾ ಪ್ರಾಧ್ಯಾಪಕರಿಗೆ ಎಂಬಿಎ ವಿದ್ಯಾರ್ಥಿ ಬೆದರಿಕೆ ಹಾಕಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಬಳಿಕ ಆ ವಿದ್ಯಾರ್ಥಿ ಶಿಕ್ಷಕಿಗೆ ಎಂಜಲು ಉಗಿದು ಹೋಗಿದ್ದಾನೆ.

ಉದಯಪುರದ ಮೋಹನ್‌ಲಾಲ್ ಸುಖಡಿಯಾ ವಿಶ್ವವಿದ್ಯಾಲಯದ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿಯೊಬ್ಬ ಮಹಿಳಾ ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದ್ದಾನೆ. ಜಿಲ್ಲಾಧಿಕಾರಿಗೂ ನನ್ನ ತಂದೆಗೂ ಸಂಬಂಧವಿದೆ ಎಂದು ಎಚ್ಚರಿಕೆ ನೀಡಿರುವ ಆತ ಮಹಿಳಾ ಶಿಕ್ಷಕಿಯ ಮುಂದೆ ತರಗತಿಯಲ್ಲಿ ಉಗುಳಿ ಅಲ್ಲಿಂದ ತೆರಳಿದ್ದಾನೆ. ಕ್ಲಾಸ್​ಗೆ 40 ನಿಮಿಷ ತಡವಾಗಿ ಬಂದಿದ್ದನ್ನು ಶಿಕ್ಷಕಿ ಪ್ರಶ್ನಿಸಿದ್ದಕ್ಕೆ ಆತ ಈ ರೀತಿ ಮಾಡಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More