ಎಂಡಿಎಚ್ ಬಿಡುಗಡೆ ಮಾಡಿದೆ ‘ಜೈ ಭಾರತ್’ ದೇಶಭಕ್ತಿಗೀತೆ
MDH: ನೂರು ವರ್ಷಗಳಿಗಿಂತಲೂ ಹಿಂದಿನಿಂದಲೂ ಭಾರತವಾಸಿಗಳ ನಾಲಗೆ ರುಚಿ ತಣಿಸುತ್ತಿರುವ ಸಂಸ್ಥೆ ಎಂಡಿಎಚ್ ಆರಂಭದಿಂದಲೂ ರಾಷ್ಟ್ರೀಯತೆಗೆ ಒತ್ತು ಕೊಡುತ್ತಾ ಬಂದಿದ್ದು ಇದೀಗ ಸ್ವಾತಂತ್ರ್ಯೋತ್ಸವಕ್ಕೆ ದೇಶಭಕ್ತಿಗೀತೆಯೊಂದನ್ನು ಬಿಡುಗಡೆ ಮಾಡಿದೆ.
105 ವರ್ಷಗಳಿಂದಲೂ ಮಸಾಲೆ ಪದಾರ್ಥಗಳ ಮಾರಾಟದ ಮೂಲಕ ದೇಶದ ಜನರ ನಾಲಗೆ ರುಚಿ ತಣಿಸುತ್ತಿರುವ ಎಂಡಿಎಚ್ ಆರಂಭದಿಂದಲೂ ರಾಷ್ಟ್ರೀಯತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು, ಪ್ರೇರೇಪಿಸಿಕೊಂಡು ಬಂದಿರುವ ಸಂಸ್ಥೆಯಾಗಿದೆ. ಇದೀಗ 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಸಮಯದಲ್ಲಿ ಎಂಡಿಎಚ್ ಸಂಸ್ಥೆಯು ‘ಜೈ ಭಾರತ್’ ಹೆಸರಿನ ದೇಶಭಕ್ತಿಗೀತೆಯೊಂದನ್ನು ಬಿಡುಗಡೆಗೊಳಿಸಿದೆ. ಈ ಸುಂದರ, ಮೈನವಿರೇಳಿಸುವ ದೇಶಭಕ್ತಿಗೀತೆಯನ್ನು ಖ್ಯಾತ ಬಾಲಿವುಡ್ ಗಾಯಕ ಶಾನ್ ಹಾಡಿದ್ದಾರೆ. ಎಂಡಿಎಚ್ ಬಿಡುಗಡೆ ಮಾಡಿರುವ ಹಾಡಿನಲ್ಲಿ, ಭಾರತದ ಹಲವು ಸಾಧನೆಗಳನ್ನು ಕೊಂಡಾಡಲಾಗಿದೆ. ಭಾರತ ಏಕೆ ವಿಶ್ವದಲ್ಲೇ ಅತ್ಯುತ್ತಮ ಎಂಬುದನ್ನು ಸಾರಿ ಹೇಳಲಾಗಿದೆ. ಎಂಡಿಎಚ್ ಬಿಡುಗಡೆ ಮಾಡಿರುವ ಸುಂದರ ದೇಶಭಕ್ತಿಗೀತೆ ಇಲ್ಲಿ ನಿಮಗಾಗಿ…
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 15, 2024 12:02 PM
Latest Videos