Independence Day: ಬೆಳಗಾವಿಯಲ್ಲಿ ಧ್ವಜಾರೋಹಣ ನಡೆಸಿ ಹೆಲ್ಮೆಟ್ ಧರಿಸುವ ಜಾಗೃತಿ ಮೂಡಿಸಿದ ಸತೀಶ್ ಜಾರಕಿಹೊಳಿ

Independence Day: ಬೆಳಗಾವಿಯಲ್ಲಿ ಧ್ವಜಾರೋಹಣ ನಡೆಸಿ ಹೆಲ್ಮೆಟ್ ಧರಿಸುವ ಜಾಗೃತಿ ಮೂಡಿಸಿದ ಸತೀಶ್ ಜಾರಕಿಹೊಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2024 | 1:27 PM

ಹೆಲ್ಮೆಟ್ ಧರಿಸುವುದು ಕಡ್ಡಾಯ ಅಂತ ಈಗಲೂ ಜಾಗೃತಿ ಅಭಿಯಾನ ನಡೆಸುವ ಅನಿವಾರ್ಯತೆ ಇರೋದು ನಾಚಿಕೆ ಹುಟ್ಟಿಸುವ ಸಂಗತಿಯೇ. ನಮ್ಮ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿರುವುದು ನಿಜವಾದರೂ ಓದಿ ವಿದ್ಯಾವಂತರಾಗುತ್ತಿರುವವರಲ್ಲಿ ಬುದ್ಧಿ ಮತ್ತು ವಿವೇಕ ಕಮ್ಮಿಯಿರೋದು ಶೋಚನೀಯ. ಹೆಲ್ಮಟ್ ಧರಿಸಿ ಬೈಕ್ ಓಡಿಸಬೇಕು ಅಂತ ಅವರಿಗೆ ಬೇರೆಯವರು ಹೇಳಬೇಕೇ?

ಬೆಳಗಾವಿ: ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದರು. ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಬೈಕ್ ರ‍್ಯಾಲಿಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ರ‍್ಯಾಲಿ ಕ್ರೀಡಾಂಗಣದಿಂದ ಆರಂಭವಾದಾಗ ಸಚಿವ ಜಾರಕಿಹೊಳಿ ಖುದ್ದು ಹೆಲ್ಮೆಟ್ ಧರಿಸಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಭೀಮಾಶಂಕರ್ ಗುಳೇದ್ ಅವರ ಬೈಕ್ ಮೇಲೆ ಪಿಲಿಯನ್ ರೈಡರ್ ಆಗಿ ಕೂತರು. ಈ ಸಂದರ್ಭದಲ್ಲಿ ಸುಮಾರು 1,000ಹೆಲ್ಮೆಟ್ ಗಳನ್ನು ಜಾರಕಿಹೊಳಿ ಸಾರ್ವಜನಿಕರಿಗೆ ವಿತರಿಸಿದರೆಂದು ನಮ್ಮ ಬೆಳಗಾವಿ ವರದಿಗಾರ ಮಾಹಿತಿ ನೀಡಿದ್ದಾರೆ. ರ‍್ಯಾಲಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಶನರ್ ಯಡಾ ಮಾರ್ಟಿನ್ ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಸತೀಶ್ ಜಾರಕಿಹೊಳಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸವದಿ ಬೆಂಬಲಿಗರು