AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಸತೀಶ್ ಜಾರಕಿಹೊಳಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸವದಿ ಬೆಂಬಲಿಗರು

ತಮ್ಮ ನ್ಯೂನತೆಗಳನ್ನು ಮುಚ್ಚಿಕೊಳ್ಳಲು ಸತೀಶ್ ಜಾರಕಿಹೊಳಿ ಕಾರ್ಯಕರ್ತರ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸವದಿ ಬೆಂಬಲಿಗರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 08, 2024 | 5:07 PM

Share

ಚಿಕ್ಕೋಡಿ ಲಿಂಗಾಯತ ಪ್ರಾಬಲ್ಯ ಹೊಂದಿರುವ ಕ್ಷೇತ್ರ, ಸತೀಶ್ ಅವರು ಎಷ್ಟು ಲಿಂಗಾಯತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ? ಹಲವಾರು ಗ್ರಾಮಗಳ ಜನ ಪ್ರಿಯಾಂಕರನ್ನ ತಾವು ನೋಡೇ ಇಲ್ಲ ವೋಟು ಹೇಗೆ ಹಾಕೋದು ಅಂತ ಕೇಳಿದರು ಎಂದು ಮುಖಂಡ ಹೇಳಿದರು

ಬೆಳಗಾವಿ: ಅಥಣಿ ಶಾಸಕ ಮತ್ತು ಅಲ್ಲಿನ ಕಾರ್ಯಕತರನ್ನು ಒಂದೇಸಮ ಟೀಕಿಸುತ್ತಿರುವ ಸಚಿವ ಸತೀಶ್ ಜಾರಕಿಹೊಳಿಗೆ (Satish Jarkiholi) ಲಕ್ಷ್ಮಣ್ ಸವದಿ (Laxman Savadi) ಬೆಂಬಲಿಗರು ತಿರುರೇಟು ನೀಡಿದ್ದಾರೆ. ಆಥಣಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಬೆಂಬಲಿಗರು, ಸಚಿವನ ಬಗ್ಗೆ ನಮಗೆ ಅಪಾರ ಗೌರವವಿದೆ, ಆದರೆ ಅವರು ತಮ್ಮ ನ್ಯೂನತೆಗಳನ್ನು (shortcomings) ಮುಚ್ಚಿಕೊಳ್ಳಲು ಕಾರ್ಯಕರ್ತರ ವಿರುದ್ಧ ಆರೋಪಗಳನ್ನ ಮಾಡುತ್ತಿದ್ದಾರೆ ಎಂದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಹಾಲುಮತ ಸಮಾಜ ಅಭ್ಯರ್ಥಿಗೆ ನೀಡುವ ಭರವಸೆಯನ್ನು ಸತೀಶ್ ನೀಡಿದ್ದರು, ಆದರೆ ಅವರು ಮಾತು ತಪ್ಪಿದಾಗ ಮುನಿಸಿಕೊಂಡ ಸಮಾಜದ ಮನವೊಲಿಸಿ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಮಾಡಿದ್ದು ಕಾರ್ಯಕರ್ತರು ಎಂದು ಬೆಂಬಲಿಗರ ಪರ ಮಾತಾಡಿದ ಕಾಂಗ್ರೆಸ್ ಮುಖಂಡ ಹೇಳುತ್ತಾರೆ. ಚಿಕ್ಕೋಡಿ ಲಿಂಗಾಯತ ಪ್ರಾಬಲ್ಯ ಹೊಂದಿರುವ ಕ್ಷೇತ್ರ, ಸತೀಶ್ ಅವರು ಎಷ್ಟು ಲಿಂಗಾಯತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ? ಹಲವಾರು ಗ್ರಾಮಗಳ ಜನ ಪ್ರಿಯಾಂಕರನ್ನ ತಾವು ನೋಡೇ ಇಲ್ಲ ವೋಟು ಹೇಗೆ ಹಾಕೋದು ಅಂತ ಕೇಳಿದರು ಎಂದು ಮುಖಂಡ ಹೇಳಿದರು. ಬೇರೆ ಬೇರೆ ಕ್ಷೇತ್ರಗಳಲ್ಲಿ ಕಡಿಮೆ ಲೀಡ್ ಎಂದು ಹೇಳುವ ಸತೀಶ್ ತಮ್ಮ ಪ್ರಾಬಲ್ಯ ಇರುವ ಅರಭಾವಿ ಮತ್ತು ಗೋಕಾಕಗಳಲ್ಲ್ಲಿ ಎಷ್ಟು ಲೀಡ್ ಕೊಡಿಸಿದ್ದಾರೆ ಎಂದು ಕಾರ್ಯಕರ್ತ ಖಾರವಾಗಿ ಪ್ರಶ್ನಿಸಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸತೀಶ್ ಜಾರಕಿಹೊಳಿ ವಿಷಯದಲ್ಲಿ ಡಿಕೆ ಶಿವಕುಮಾರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಯಾಕೆಂದು ಗೊತ್ತಾಗಲಿಲ್ಲ!