AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ಯಾರಿಗಾದರೂ ನೀಡಲಿ ಮೈತ್ರಿ ಧರ್ಮ ನಿಭಾಯಿಸುತ್ತೇವೆ: ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ಯಾರಿಗಾದರೂ ನೀಡಲಿ ಮೈತ್ರಿ ಧರ್ಮ ನಿಭಾಯಿಸುತ್ತೇವೆ: ನಿಖಿಲ್ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 08, 2024 | 2:49 PM

Share

ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಹೇಗಿದೆ ಅನ್ನೋದನ್ನು ಸಮೀಕ್ಷೆ ನಡೆಸಿ ವರದಿಯನ್ನು ಕೇಂದ್ರದ ಬಿಜೆಪಿ ನಾಯಕರಿಗೆ ಕಳಿಸುತ್ತೇವೆ ಎಂದು ಹೇಳಿದರು. ತೀರ್ಮಾನ ಬಿಜೆಪಿ ನಾಯಕರಿಗೆ ಬಿಟ್ಟಿದ್ದು, ಅವರು ಜೆಡಿಎಸ್ ಪಕ್ಷಕ್ಕೆ ಟಿಕೆಟ್ ನೀಡಿದರೆ ಸಂತೋಷ, ಬಿಜೆಪಿ ಅಭ್ಯರ್ಥಿಗೆ ನೀಡಿದರೂ ಮೈತ್ರಿ ಧರ್ಮ ನಿಭಾಯಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ಚನ್ನಪಟ್ಟಣ ಕ್ಷೆತ್ರದಿಂದ ವಿಧಾನಸಭೆಗೆ (Channapatna Assembly constituency) ಆಯ್ಕೆಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು(HD Kumaraswamy) ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವುದರಿಂದ ವಿಧಾನಸಭಾ ಕ್ಷೇತ್ರ ತೆರವುಗೊಂಡಿದ್ದು ಅಲ್ಲಿ ಉಪ ಚುನಾವಣೆ ನಡೆಯಲಿದೆ. ಈಗ ಹುಟ್ಟಿರುವ ಪ್ರಶ್ನೆಯೇನೆಂದರೆ, ಉಪ ಚುನಾವಣೆಯಲ್ಲಿ ಅಲ್ಲಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆಯೇ ಅಥವಾ ಬಿಜೆಪಿ? ಮಾಧ್ಯಮದವರು ಇವತ್ತು ನಗರದಲ್ಲಿ ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿಯವರನ್ನು (Nikhil Kumaraswamy) ಕೇಳಿದಾಗ ಲೋಕಸಭಾ ಚುನಾವಣೆಯಲ್ಲಿ  ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿಯವರು 3 ಕ್ಷೇತ್ರಗಳನ್ನು ಕೇಳಿದ್ದರು, ಮತ್ತು ಕೇಂದ್ರದ ಬಿಜೆಪಿ ನಾಯಕರು ಅವರ ಬೇಡಿಕೆಗೆ ಮನ್ನಣೆ ನೀಡಿದ್ದರು, ಟಿಕೆಟ್ ಹಂಚಿಕೆ ವಿಚಾರದಲ್ಲಿ  ಯಾವುದೇ ರೀತಿ ಗೊಂದಲ ಉಂಟಾಗಲು ನಾವು ಅವಕಾಶ  ನೀಡಿರಲಿಲ್ಲ ಎಂದಯ ಹೇಳಿದರು. ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಹೇಗಿದೆ ಅನ್ನೋದನ್ನು ಸಮೀಕ್ಷೆ ನಡೆಸಿ ವರದಿಯನ್ನು ಕೇಂದ್ರದ ಬಿಜೆಪಿ ನಾಯಕರಿಗೆ ಕಳಿಸುತ್ತೇವೆ ಎಂದು ಹೇಳಿದರು. ತೀರ್ಮಾನ ಬಿಜೆಪಿ ನಾಯಕರಿಗೆ ಬಿಟ್ಟಿದ್ದು, ಅವರು ಜೆಡಿಎಸ್ ಪಕ್ಷಕ್ಕೆ ಟಿಕೆಟ್ ನೀಡಿದರೆ ಸಂತೋಷ, ಬಿಜೆಪಿ ಅಭ್ಯರ್ಥಿಗೆ ನೀಡಿದರೂ ಮೈತ್ರಿ ಧರ್ಮ ನಿಭಾಯಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಬಿಜೆಪಿ ಶಾಸಕನ ವಿರುದ್ಧ ಟೀಕೆ ಮಾಡಿದ್ದು ಅಪ್ರಬುದ್ಧತೆ!