ಹೆಚ್​ಡಿಕೆ ಅಪರೇಷನ್ ಬಗ್ಗೆ ಅನುಮಾನ; ತಂದೆ ವಿಚಾರ ಮಾತನಾಡುವಾಗ ನಿಖಿಲ್ ಕುಮಾರಸ್ವಾಮಿ ಭಾವುಕ

ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಹೆಚ್​ಡಿ ಕುಮಾರಸ್ವಾಮಿ ಅವರ ಅಪರೇಷನ್​ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಬೇರೆಯವರು ಈ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ ಎಂದು ಹೆಚ್​ಡಿಕೆ ಆಪರೇಷನ್​​ ವಿಚಾರ ಮಾತಾಡುವಾಗ ನಿಖಿಲ್ ಭಾವುಕರಾಗಿದ್ದಾರೆ.

Follow us
ಪ್ರಶಾಂತ್​ ಬಿ.
| Updated By: ಆಯೇಷಾ ಬಾನು

Updated on:Mar 30, 2024 | 2:07 PM

ಮಂಡ್ಯ, ಮಾರ್ಚ್​.30: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಚುನಾವಣೆ ಬಂದ್ರೆ ಸಾಕು ಆಸ್ಪತ್ರೆಗೆ ಸೇರ್ತಾರೆ ಎಂಬ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisiddegowda) ಅನುಮಾನಕ್ಕೆ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಬೇರೆಯವರು ಈ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ ಎಂದು ಹೆಚ್​ಡಿಕೆ ಆಪರೇಷನ್​​ ವಿಚಾರ ಮಾತಾಡುವಾಗ ನಿಖಿಲ್ (Nikhil Kumaraswamy) ಭಾವುಕರಾಗಿದ್ದಾರೆ.ತಂದೆಯ ವಿಚಾರದ ಬಗ್ಗೆ ಮಾತನಾಡುವಾಗ ಸಹಜ ಅಲ್ಲವೇ. ತಂದೆ-ಮಗನ ಸಂಬಂಧ ಅಂದ್ರೆ ಭಾವನೆಗಳು ಎಂದು ಮಂಡ್ಯದಲ್ಲಿ JDS ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಂದೆ ಬಗ್ಗೆ ಮಾತನಾಡುತ್ತ ಭಾವುಕರಾದರು.

ಮಂಡ್ಯದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮೊದಲ ಹಂತದ ಸಭೆಯನ್ನು ಇಂದು ನಾಗಮಂಗಲದಲ್ಲಿ ಮಾಡ್ತಾ ಇದ್ದೀವಿ. ಪ್ರತಾಪ್ ಸಿಂಹ ಸಹ ನಮ್ಮ ಜೊತೆ ಇರ್ತಾರೆ. ಮೂರು‌ ತಿಂಗಳಿಂದ ಹಲವು ಸಭೆಗಳು ನಡೆದಿವೆ. ಅನಿರೀಕ್ಷಿತ ಬೆಳವಣಿಗೆಯಲ್ಲಿ ಕುಮಾರಣ್ಣ ಮಂಡ್ಯ ಅಭ್ಯರ್ಥಿ ಆಗಿದ್ದಾರೆ. ಕಾರ್ಯಕರ್ತರ ಒತ್ತಾಸೆಗೆ ಸೋತು ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕುಮಾರಣ್ಣ ಸ್ಪರ್ಧೆ ಮಾಡ್ತಾ ಇದ್ದಾರೆ. ರಮೇಶ್ ಬಂಡಿಸಿದ್ದೇಗೌಡ ಅವರ ಹಿರಿತನಕ್ಕೆ ಈ ಮಾತು ಕ್ಷೋಭೆ ತರಲ್ಲ. ನಮ್ಮ ತಂದೆಯವರಿಗೆ ಆಗಿರುವ ಆಪರೇಷನ್ನು ಇವರಿಗೆ ಪ್ರೂ ಮಾಡುವ ಅಗತ್ಯವಿಲ್ಲ. ಆಪರೇಷನ್ ಆಗಿದೆ ಎಂಬ ಅನುಕಂಪದಲ್ಲಿ ಮತ ಕೇಳುವ ಪ್ರಮೇಯ ನಮಗೆ ಇಲ್ಲ. ನಮ್ಮ ತಂದೆಗೆ ಆಪರೇಷನ್ ಆಗಿರೋದು ನಿಜ. ಮೂರನೇ ಬಾರಿಗೆ ಅವರಿಗೆ ಹೃದಯದ ಶಸ್ತ್ರ ಚಿಕಿತ್ಸೆ ಆಗಿದೆ. ಇದನ್ನು ಸಾಬೀತು ಮಾಡುವ ಅವಶ್ಯಕತೆ ನಮಗೆ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಹಾರ್ಟ್​​ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ: ವ್ಯಂಗ್ಯವಾಡಿದ ಕಾಂಗ್ರೆಸ್​ ಶಾಸಕ

6 ವರ್ಷದಲ್ಲಿ ಮೂರನೇ ಬಾರಿ ಹೃದಯದ ಆಪರೇಷನ್ ಆಗಿರೋದು ನಮಗೆ ನೋವು ಆಗಿದೆ. ನಮ್ಮ ಕುಟುಂಬ ಮೊಸಳೆ ಕಣ್ಣೀರು ಹಾಕಿಲ್ಲ. ಕುಮಾರಣ್ಣ ಭಾವನಾತ್ಮಕ ಜೀವಿ. ಜನರಿಗೆ ಕಷ್ಟಗಳಾದಾಗ ಕುಮಾಣ್ಣನಿಗೆ ಕಣ್ಣೀರು ಬರುತ್ತೆ. ಕುಮಾರಣ್ಣನ ಸ್ಪರ್ಧೆಯನ್ನು ಕಾಂಗ್ರೆಸ್ ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಹೀಗೆ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ. ಜಿಲ್ಲೆಯ ಹಾಗೂ ರಾಜ್ಯದ ಜನರು ನೋಡುತ್ತಾ ಇದ್ದಾರೆ. ಮತದಾರ ತಂದೆ ತಾಯಿಗಳ ಕೈಯಲ್ಲಿ ಇದಕ್ಕೆ ಉತ್ತರ ನೀಡುವ ಶಕ್ತಿ ಇದೆ. ನಾವು ಮೊದಲಿಗೆ ಭಾರತೀಯರು, ಕನ್ನಡಿಗರು. ಕುಮಾರಣ್ಣ ಎಲ್ಲಿ ಹೋಗಿಬೇಕಾದ್ರು ಸ್ಪರ್ಧೆ ಮಾಡಿವಂತೆ ಈ ರಾಜ್ಯದ ಜನರು ಶಕ್ತಿ ಕೊಟ್ಟಿದ್ದಾರೆ. ಜನರು ಕುಮಾರಣ್ಣನ ಸ್ಪರ್ಧೆ ನಿರ್ಧಾರ ಮಾಡ್ತಾರೆ. ಬೇರೆ ಯಾರು ಅವರ ಸ್ಪರ್ಧೆ ನಿರ್ಣಯ ಮಾಡಲ್ಲ. ಜನರ ಆಶಯದಂತೆ ಕುಮಾರಣ್ಣ ಮಂಡ್ಯದಲ್ಲಿ ಸ್ಪರ್ಧೆ ಮಾಡ್ತಿದ್ದಾರೆ. ನಾವು ಬಿಜೆಪಿ ಅವರನ್ನು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಸುಮಲತಾ ಅವರನ್ನು ನಾವು ಬೆಂಬಲ ಕೇಳ್ತೀವಿ ಅವರನ್ನು ಹೋಗಿ ಮಾತಾಡಿಸುತ್ತೇವೆ ಎಂದರು.

ರಾಜ್ಯದ ಪಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:33 pm, Sat, 30 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ