ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Nov 18, 2024 | 9:03 PM

ಜಯನಗರಕ್ಕೆ ಅನುದಾನ ನೀಡದಿರುವ ಬಗ್ಗೆ ನಾಳೆ ಬಿಜೆಪಿ ಶಾಸಕರ ಸಭೆ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ಎಷ್ಟಾದರೂ ಸಭೆಗಳನ್ನು ಮಾಡಿಕೊಳ್ಳಲಿ, ಬೆಂಗಳೂರು ಎಷ್ಟು ಅಧೋಗತಿ ತಲುಪಿದೆ ಎಂದಿದ್ದಾರೆ. ಎಲ್ಲಿ ಅಧೋಗತಿ ತಲುಪಿದೆ ಅನ್ನೋದನ್ನು ಅವರು ಹೇಳಬೇಕು ಸವಾಲ್ ಹಾಕಿದ್ದಾರೆ.

ಬೆಂಗಳೂರು, (ನವೆಂಬರ್ 18): ಬಿಜೆಪಿಯವರು ನಮ್ಮ ಶಾಸಕರಿಗೆ 50 ಕೋಟಿ ರೂ. ಆಫರ್​ ನೀಡುತ್ತಿದ್ದಾರೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಆರೋಪ ಬೆನ್ನಲ್ಲೇ ಕಾಂಗ್ರೆಸ್​ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಈಗ 100 ಕೋಟಿ ರೂ. ಸ್ಫೋಟಕ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ವಿರೋಧ ಪಕ್ಷ ಬಿಜೆಪಿ ಸಿಡಿದೆದಿದ್ದು, ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ. ಸಾಕ್ಷಿ ಕೊಡಿ ಅಂತ ಸವಾಲು ಹಾಕುತ್ತಿದ್ದಾರೆ.ಇನ್ನು ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಇನ್ನು ಜಯನಗರ ಕ್ಷೇತ್ರಕ್ಕೆ ಅನುದಾನದ ವಿಚಾರವಾಗಿ ಬಿಜೆಪಿ ಶಾಸಕ ಸಭೆ ಬಗ್ಗೆ ಪ್ರತಿಕ್ರಿಯಿಸಿ , ನೂರು ಸಭೆ ಮಾಡಲಿ. ಮಂತ್ರಿಯಾದ ಮೇಲೆ ಅಧೋಗತಿ ಆಗಿದೆ ಅಂದ್ರಲ್ಲ. ಏನು ಅಧೋಗತಿ ಮೊದಲು ಹೇಳಲಿ. ಬೇರೆ ಕ್ಷೇತ್ರಗಳಿಗೂ ಹಣ ಕೊಟ್ಟಿದ್ದೇವೆ, ಜಯನಗರ ಚಿಕ್ಕ ಕ್ಷೇತ್ರ. ರಾಮಮೂರ್ತಿ ಹೇಳಿದ ಹಾಗೆ ಏನು ಅಧೋಗತಿ ಅಂತಾ ಹೇಳಲಿ ಎಂದು ಸವಾಲು ಹಾಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Maharashtra Assembly Election: ಮಹಾರಾಷ್ಟ್ರ ಚುನಾವಣಾ ಅಖಾಡಕ್ಕಿಳಿಯಲು ಡಿಸಿಎಂ ಡಿಕೆ ಶಿವಕುಮಾರ್ ಸಜ್ಜು

Published on: Nov 18, 2024 07:25 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.