ಎಸ್ ಎಮ್ ಕೃಷ್ಣ ಸೋದರನ ಮಗ ಮಂಡ್ಯದಲ್ಲಿ ಸಂಸದೆ ಸುಮಲತಾರನ್ನು  ಭೇಟಿಯಾಗಿದ್ದು ಕುತೂಹಲ ಮೂಡಿಸುತ್ತಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2022 | 5:18 PM

ಸಾಮಾನ್ಯವಾಗಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಗುರು ಚರಣ್ ಅವರು ಯಾವ ಉದ್ದೇಶದಿಂದ ಸಂಸದೆಯನ್ನು ಭೇಟಿಯಾದರು ಎಂಬ ವಿಷಯ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.

ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಮತ್ತು ಜಿಲ್ಲೆಯ ಜೆಡಿ(ಎಸ್) ಕಾರ್ಯಕರ್ತರ ನಡುವೆ ಕಿತ್ತಾಟ ಜೋರಾಗೇ ನಡೆಯುತ್ತಿದೆ. ಆದರೆ, ಗುರುವಾರ ನಗರದಲ್ಲಿ ಗಮನ ಸೆಳೆದಿದ್ದ್ದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಎಸ್ ಎಮ್ ಕೃಷ್ಣ (SM Krishna) ಅವರ ಸಹೋದರನ ಪುತ್ರ ಗುರುಚರಣ್ (Gurucharan) ಅವರು ಸುಮಲತಾರನ್ನು ಭೇಟಿಯಾಗಿದ್ದು. ಸಾಮಾನ್ಯವಾಗಿ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಗುರು ಚರಣ್ ಅವರು ಯಾವ ಉದ್ದೇಶದಿಂದ ಸಂಸದೆಯನ್ನು ಭೇಟಿಯಾದರು ಎಂಬ ವಿಷಯ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ.