ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ನಟಿ ಮೇಘಾ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ದಿಲ್ ಪಸಂದ್’ (Dil Pasand) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರದಲ್ಲಿ ಅವರು ಡಾರ್ಲಿಂಗ್ ಕೃಷ್ಣ (Darling Krishna) ಜೊತೆ ನಟಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರ ಹೇಗಿದೆ ಎಂಬುದನ್ನು ಮೇಘಾ ಶೆಟ್ಟಿ ವಿವರಿಸಿದ್ದಾರೆ. ‘ನನ್ನದು ಮುಗ್ಧ ಹುಡುಗಿಯ ಪಾತ್ರ. ಇವರು (ಡಾರ್ಲಿಂಗ್ ಕೃಷ್ಣ) ಬಂದು ವಿಷ ಕೊಟ್ಟು ಇದು ಅಮೃತ ಅಂತ ಹೇಳಿದ್ರೆ ಕುಡಿದುಬಿಡ್ತೀನಿ. ಖಂಡಿತವಾಗಿಯೂ ನೀವೆಲ್ಲ ಈ ಚಿತ್ರವನ್ನು ಎಂಜಾಯ್ ಮಾಡ್ತೀರ ಎಂಬ ನಂಬಿಕೆ ಇದೆ’ ಎಂದು ಮೇಘಾ ಶೆಟ್ಟಿ (Megha Shetty) ಹೇಳಿದ್ದಾರೆ. ಈ ಸಿನಿಮಾಗೆ ಸುಮಂತ್ ಕ್ರಾಂತಿ ಬಂಡವಾಳ ಹೂಡಿದ್ದು, ಶಿವ ತೇಜಸ್ ನಿರ್ದೇಶನ ಮಾಡಿದ್ದಾರೆ. ನವೆಂಬರ್ 11ಕ್ಕೆ ಈ ಚಿತ್ರ ಬಿಡುಗಡೆ ಆಗಲಿದೆ.
Published On - 9:21 am, Tue, 4 October 22