Raayan Raj Sarja: ಕಾಡಿನ ಥೀಮ್​ನಲ್ಲಿ ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬ; ಮೇಘನಾ ಮನೆಯಲ್ಲಿ ಅದ್ದೂರಿ ಆಚರಣೆ

| Updated By: ಮದನ್​ ಕುಮಾರ್​

Updated on: Oct 22, 2021 | 1:49 PM

Meghana Raj: ಪುತ್ರ ರಾಯನ್​ ರಾಜ್​ ಸರ್ಜಾನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್​ ಅವರು ಸಡಗರದಿಂದ ಆಚರಿಸುತ್ತಿದ್ದಾರೆ. ಬರ್ತ್​ಡೇ ಸೆಲೆಬ್ರೇಷನ್​ಗಾಗಿ ಕಾಡಿನ ಥೀಮ್​ನಲ್ಲಿ ಮನೆಯನ್ನು ಅಲಂಕರಿಸಲಾಗಿದೆ.

ಮೇಘನಾ ರಾಜ್​-ಚಿರಂಜೀವಿ ಸರ್ಜಾ ಪುತ್ರ ರಾಯನ್​ ರಾಜ್​ ಸರ್ಜಾಗೆ ಇಂದು (ಅ.22) ಜನ್ಮದಿನದ ಸಂಭ್ರಮ. ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಮೇಘನಾ ರಾಜ್​ ಮನೆಯಲ್ಲಿ ಆಚರಿಸಲಾಗುತ್ತಿದೆ. ಕಾಡಿನ ಥೀಮ್​ನಲ್ಲಿ ಅದ್ದೂರಿಯಾಗಿ ಡೆಕೊರೇಷನ್​ ಮಾಡಲಾಗಿದೆ. ‘ರಾಯನ್​ ಕಿಂಗ್​ಡಮ್​ಗೆ ಸ್ವಾಗತ’ ಎಂಬ ಫಲಕ ಗಮನ ಸೆಳೆಯುತ್ತಿದೆ. ಚಿತ್ರರಂಗದ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಲಾಗಿದೆ. ಜ್ಯೂ. ಚಿರುಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್​ ಬದುಕಿನಲ್ಲಿ ಕತ್ತಲೆ ಆವರಿಸಿತ್ತು. ಅವರ ಬಾಳಿಗೆ ಹೊಸ ಭರವಸೆಯ ಬೆಳಗಾಗಿ ಬಂದವನೇ ರಾಯನ್​ ರಾಜ್​ ಸರ್ಜಾ. ಮಗನ ಆಗಮನದ ಬಳಿಕ ಮೇಘನಾ ರಾಜ್​ ಮೊಗದಲ್ಲಿ ನಗು ಚಿಗುರಿತ್ತು. ಪುತ್ರನ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಅವರು ಸಡಗರದಿಂದ ಆಚರಿಸುತ್ತಿದ್ದಾರೆ. ಧ್ರುವ ಸರ್ಜಾ, ಪ್ರೇರಣಾ ಕೂಡ ವಿಶ್​ ಮಾಡಿದ್ದಾರೆ.

ಇದನ್ನೂ ಓದಿ:

HBD Raayan Raj Sarja: ರಾಯನ್​ ರಾಜ್​ ಸರ್ಜಾ ಹುಟ್ಟುಹಬ್ಬಕ್ಕೆ ಧ್ರುವ-ಪ್ರೇರಣಾ ವಿಶ್​; ಚಿರು ಪುತ್ರನಿಗೆ ಶುಭಾಶಯಗಳ ಸುರಿಮಳೆ

Meghana Raj: 45 ವರ್ಷ ಹಳೇ ಗೊಂಬೆಗಳ ಜತೆ ರಾಯನ್​ ರಾಜ್​ ಸರ್ಜಾ; ಮೇಘನಾ ರಾಜ್-ಚಿರು ಪುತ್ರನಿಗೆ ಮೊದಲ ದಸರಾ

Follow us on