ರಾಯನ್ ಸರ್ಜಾಗೆ ಮಾತು ಕಲಿಸಿದ ಮೇಘನಾ ರಾಜ್; ಇಲ್ಲಿದೆ ವಿಡಿಯೋ
ರಾಯನ್ ಫೋಟೋ ಹಾಗೂ ವಿಡಿಯೋಗಳನ್ನು ನೋಡುವುದು ಎಂದರೆ ಅಭಿಮಾನಿಗಳಿಗೆ ಖುಷಿಯ ವಿಚಾರ. ಮೇಘನಾ ಅವರು ರಾಯನ್ಗೆ ಮಾತು ಕಲಿಸುತ್ತಿದ್ದಾರೆ.
ಮೇಘನಾ ರಾಜ್ (Meghan Raj) ಬಾಳಲ್ಲಿ ಮತ್ತೆ ಬೆಳಕು ಮೂಡಿದೆ. ಪತಿ ಚಿರಂಜೀವಿ ಸರ್ಜಾ ಅವರನ್ನು (Chiranjeevi Sarja) ಕಳೆದುಕೊಂಡ ನಂತರ ಮಂಕಾಗಿದ್ದ ಅವರ ಬಾಳಲ್ಲಿ ಬಂದಿದ್ದು ಜ್ಯೂ. ಚಿರು. ಆತನಿಗೆ ರಾಯನ್ ರಾಜ್ ಸರ್ಜಾ (Raayan Raj Sarja) ಎಂದು ಹೆಸರು ಇಡಲಾಗಿದೆ. ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆಗಿರುವ ಮೇಘನಾ ರಾಜ್ ಅವರು ಕುಟುಂಬದ ಕಡೆಗೂ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಾಕಷ್ಟು ಸಮಯವನ್ನು ಮಗನ ಜತೆ ಕಳೆಯುತ್ತಿದ್ದಾರೆ. ರಾಯನ್ ಫೋಟೋ ಹಾಗೂ ವಿಡಿಯೋಗಳನ್ನು ನೋಡುವುದು ಎಂದರೆ ಅಭಿಮಾನಿಗಳಿಗೆ ಖುಷಿಯ ವಿಚಾರ. ಮೇಘನಾ ಅವರು ರಾಯನ್ಗೆ ಮಾತು ಕಲಿಸುತ್ತಿದ್ದಾರೆ. ಅಮ್ಮ ಹೇಳಿದಂತೆ ರಾಯನ್ ಹೇಳಿದ್ದಾನೆ. ಈ ವಿಡಿಯೋ ನೋಡಿ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ‘ರಾಯನ್ ಸರ್ಜಾ ತಂದೆ ತರಹ ಆಗಬೇಕು ಎಂದರೆ ಇನ್ನೂ ನೂರು ಜನ್ಮ ಎತ್ತಿ ಬರಬೇಕು’; ಮೇಘನಾ ರಾಜ್ ಭಾವುಕ ನುಡಿ
‘ಇಂಥ ಸಿನಿಮಾ ಮಾಡೋದಕ್ಕೆ ಹೆಮ್ಮೆ ಇದೆ’ ಹೊಸ ಚಿತ್ರದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟ ಮೇಘನಾ ರಾಜ್