Video: ಚಾಲಕನಿಗೆ ತಪ್ಪಿತು ಪ್ರಜ್ಞೆ, ವಿಮಾನದಂತೆ ಹಾರಿದ ಮರ್ಸಿಡಿಸ್ ಕಾರು, ಅಪಘಾತದ ವಿಡಿಯೋ
ಈ ಘಟನೆ ನಡೆದಿದ್ದು ರೊಮೇನಿಯಾದಲ್ಲಿ. ವೇಗವಾಗಿ ಬಂದ ಕಾರೊಂದು ನೋಡ ನೋಡುತ್ತಲೇ ವಿಮಾನದ ರೀತಿ ಮೇಲೆ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೆಟ್ರೋಲ್ ಬಂಕ್ಗೆ ಡಿಕ್ಕಿ ಹೊಡೆದಿದೆ. ಡಿಸೆಂಬರ್ 3ರಂದು ಒರಾಡಿಯಾ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಮರ್ಸಿಡಿಸ್ ಕಾರು ತಪ್ಪು ದಾರಿಯಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದೆ. ಕಾರು ಹಾರುವಾಗ ಕೆಳಗೆ ಎರಡು ಕಾರುಗಳು ಕೂಡ ಇದ್ದವು.55 ವರ್ಷದ ಚಾಲಕನಿಗೆ ತೀವ್ರ ಮಧುಮೇಹ ಸಮಸ್ಯೆ ಇದ್ದು, ಡ್ರೈವ್ ಮಾಡುವಾಗ ಏಕಾಏಕಿ ಅವರು ಮೂರ್ಛೆ ಹೋಗಿದ್ದರು
ರೊಮೇನಿಯಾ, ಡಿಸೆಂಬರ್ 07: ಈ ಘಟನೆ ನಡೆದಿದ್ದು ರೊಮೇನಿಯಾದಲ್ಲಿ. ವೇಗವಾಗಿ ಬಂದ ಕಾರೊಂದು ನೋಡ ನೋಡುತ್ತಲೇ ವಿಮಾನದ ರೀತಿ ಮೇಲೆ ಹಾರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಪೆಟ್ರೋಲ್ ಬಂಕ್ಗೆ ಡಿಕ್ಕಿ ಹೊಡೆದಿದೆ. ಡಿಸೆಂಬರ್ 3ರಂದು ಒರಾಡಿಯಾ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಮರ್ಸಿಡಿಸ್ ಕಾರು ತಪ್ಪು ದಾರಿಯಲ್ಲಿ ಬಂದಿದ್ದಲ್ಲದೆ, ವೇಗವಾಗಿ ಬಂದು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದಿದೆ. ಕಾರು ಹಾರುವಾಗ ಕೆಳಗೆ ಎರಡು ಕಾರುಗಳು ಕೂಡ ಇದ್ದವು.
55 ವರ್ಷದ ಚಾಲಕನಿಗೆ ತೀವ್ರ ಮಧುಮೇಹ ಸಮಸ್ಯೆ ಇದ್ದು, ಡ್ರೈವ್ ಮಾಡುವಾಗ ಏಕಾಏಕಿ ಅವರು ಮೂರ್ಛೆ ಹೋಗಿದ್ದರು. ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಳೆ ಮುರಿತಗಳು ಉಂಟಾಗಿವೆ ಆದರೆ ಮಾರಣಾಂತಿಕ ಗಾಯಗಳೇನೂ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 90 ದಿನಗಳ ವರೆಗೆ ಚಾಲಕನ ಪರವಾನಗಿಯನ್ನು ಅಮನಾತುಗೊಳಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

