ತಮ್ಮ ತಂಡದ ಲೀಡರ್ ಸಂಗೀತಾ ವಿರುದ್ಧವೇ ತಿರುಗಿ ಬಿದ್ದ ಮೈಕಲ್​; ಕಣ್ಣೀರಿಟ್ಟ ಚಾರ್ಲಿ ಬೆಡಗಿ

|

Updated on: Dec 21, 2023 | 9:04 AM

ಸಮಸ್ಯೆಗಳು ಪರಿಹಾರ ಆಗಬಹುದು ಎಂದು ಸಂಗೀತಾ ಭಾವಿಸಿದಂತೆ ಇತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ. ಸಂಗೀತಾ ವಿರುದ್ಧ ಮೈಕಲ್ ತಿರುಗಿ ಬಿದ್ದಿದ್ದಾರೆ. ಪರಿಸ್ಥಿತಿ ಹೀಗೆ ಆಗಬಹುದು ಎಂಬುದು ವಿನಯ್ ಅವರು ಮೊದಲೇ ಊಹಿಸಿದ್ದರು.

ಬಿಗ್ ಬಾಸ್​ನಲ್ಲಿ ಸಂಗೀತಾ ಶೃಂಗೇರಿ (Sangeetha Sringeri) ಪದೇ ಪದೇ ಎಲ್ಲರ ಟೀಕೆಗೆ ಗುರಿಯಾಗುತ್ತಿದ್ದಾರೆ. ಸಂಗೀತಾ ಕಂಡರೆ ಮೈಕಲ್​ಗೆ ಸ್ವಲ್ಪವೂ ಇಷ್ಟವಿಲ್ಲ. ಸದಾ ಒಂದಿಲ್ಲೊಂದು ವಿಚಾರಕ್ಕೆ ಇಬ್ಬರೂ ಜಗಳ ಆಡುತ್ತಲೇ ಇರುತ್ತಾರೆ. ಈಗ ಸಂಗೀತಾ ಶೃಂಗೇರಿ ಹಾಗೂ ಮೈಕಲ್ ಒಂದೇ ತಂಡದಲ್ಲಿದ್ದಾರೆ. ಎಲ್ಲಾ ಸಮಸ್ಯೆಗಳು ಪರಿಹಾರ ಆಗಬಹುದು ಎಂದು ಸಂಗೀತಾ ಭಾವಿಸಿದಂತೆ ಇತ್ತು. ಆದರೆ, ಪರಿಸ್ಥಿತಿ ಹಾಗಿಲ್ಲ. ಸಂಗೀತಾ ವಿರುದ್ಧ ಮೈಕಲ್ ತಿರುಗಿ ಬಿದ್ದಿದ್ದಾರೆ. ಪರಿಸ್ಥಿತಿ ಹೀಗೆ ಆಗಬಹುದು ಎಂಬುದು ವಿನಯ್ ಅವರು ಮೊದಲೇ ಊಹಿಸಿದ್ದರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ