ಜನರ ವೋಟ್ ಅಲ್ಲ, ಮನೆಯವರ ವೋಟ್ ಆಧರಿಸಿ ಮಿಡ್ ವೀಕ್ ಎಲಿಮಿನೇಷನ್

Updated By: ರಾಜೇಶ್ ದುಗ್ಗುಮನೆ

Updated on: Oct 16, 2025 | 8:46 AM

Bigg Boss Elimination: ಬಿಗ್ ಬಾಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್​ಗಳು ಎದುರಾಗುತ್ತಿವೆ. ಹೀಗಿರುವಾಗಲೇ ಸ್ಪರ್ಧಿಗಳ ಎಲಿಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ವಾರದ ಮಧ್ಯದಲ್ಲಿ ಇಬ್ಬರು ಔಟ್ ಆಗುವ ಸೂಚನೆ ಸಿಕ್ಕಿದೆ. ಅದಕ್ಕೆ ಸಂಬಂಧಿಸಿದಂತೆ ಪ್ರೋಮೋ ಕೂಡ ಬಿಡುಗಡೆ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಹಾಕುವ ವೋಟ್ ಕೇವಲ ನಾಮಿನೇಷನ್​ಗೆ ಮಾತ್ರ ಸೀಮಿತ ಆಗುತ್ತದೆ. ಅದನ್ನು, ಯಾರೂ ಎಲಿಮಿನೇಷನ್​ಗೆ ಪರಿಗಣಿಸುವುದಿಲ್ಲ. ಆದರೆ, ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಹೊಸ ಟ್ವಿಸ್ಟ್ ನೀಡಲಾಗಿದೆ. ಮಿಡ್ ವೀಕ್ ಎಲಿಮಿನೇಷನ್​ಗೆ ಮನೆಯವರ ವೋಟ್ ಪಡೆದು ಎಲಿಮಿನೇಷನ್ ಪ್ರಕ್ರಿಯೆ ನಡೆಸಿರೋದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.